Crime News: ವರದಕ್ಷಿಣೆ ಮೋಹ- ಹೆಂಡ್ತಿಯನ್ನೇ ಉಸಿರುಗಟ್ಟಿಸಿ ಕೊಲೆಗೈದ ಪಾಪಿ ಪತಿ!

0
Spread the love

ದಾವಣಗೆರೆ:- ಹರಿಹರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ವರದಕ್ಷಿಣೆಗಾಗಿ ಪತಿಯೇ, ಪತ್ನಿಯ ಕತ್ತನ್ನು ಸೀರೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಂದಿರುವ ಘಟನೆ ಜರುಗಿದೆ.

Advertisement

26 ವರ್ಷದ ನೇತ್ರಾವತಿ ಕೊಲೆಯಾದ ಪತ್ನಿ ಎನ್ನಲಾಗಿದೆ. ಕಳೆದ 7 ವರ್ಷದ ಹಿಂದೆ ಕುಟುಂಬಸ್ಥರು ಹರಳಹಳ್ಳಿ ಗ್ರಾಮದ ದೇವೇಂದ್ರಪ್ಪನ ಜೊತೆ ನೇತ್ರಾವತಿಯವರನ್ನು ಮದುವೆ ಮಾಡಿಕೊಟ್ಟಿದ್ದರು. ಮದುವೆ ಸಂದರ್ಭದಲ್ಲಿ ಕುಟುಂಬಸ್ಥರು ವರದಕ್ಷಿಣೆಯಾಗಿ 10 ತೊಲ ಬಂಗಾರ 1 ಲಕ್ಷ ರೂ. ನಗದು ಹಾಗೂ ಬೈಕ್ ಕೊಡಿಸಿದ್ದರು. ಮೃತ ನೇತ್ರಾವತಿ ಒಂದು ಗಂಡು ಮತ್ತು ಹೆಣ್ಣು ಮಗುವನ್ನು ಹೊಂದಿದ್ದರು

ದೇವೇಂದ್ರಪ್ಪನ ಕುಟುಂಬಸ್ಥರು ವರದಕ್ಷಿಣೆಗಾಗಿ ಹಲವು ಬಾರಿ ಪೀಡಿಸಿ ಹಲ್ಲೆ ನಡೆಸಿದ್ದರು. ಈ ಹಿಂದೆ ಕೂಡಾ ನೇತ್ರಾವತಿ ಮೇಲೆ ಹಲ್ಲೆ ನಡೆಸಿದ್ದರು. ಹಿರಿಯರು ರಾಜಿ ಸಂಧಾನ ಮಾಡಿ ಇಬ್ಬರನ್ನು ಒಂದು ಮಾಡಿದ್ದರು. ಆದರೆ ಸೋಮವಾರ ರಾತ್ರಿ ದೇವೇಂದ್ರಪ್ಪ ಹಾಗೂ ಕುಟುಂಬಸ್ಥರು ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ನೇತ್ರಾವತಿ ಪೋಷಕರು ಆರೋಪಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here