ಕೊಪ್ಪಳ:- ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ಮರಳು ತುಂಬಿದ್ದ ಟಿಪ್ಪರ್ ಹರಿದು ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ.
ಕನಕಗಿರಿ ತಾಲೂಕಿನ ಗುಡೂರಿನ ನಿವಾಸಿಗಳಾದ 27 ವರ್ಷದ ರಮೇಶ ಜವಳಗೇರಿ, 34 ವರ್ಷದ ಸಿದ್ದಪ್ಪ ಪ್ಯಾಟ್ಯಾಳ್ ಮೃತರು. ಇಂದು ಬೈಕ್ ಮೇಲೆ ಹೋಗುತ್ತಿದ್ದ ವೇಳೆ ಮರಳು ತುಂಬಿದ ಟಿಪ್ಪರ್ ಹರಿದಿದೆ. ಪರಿಣಾಮ ಟಿಪ್ಪರ್ ಕೆಳಗೆ ಸಿಲುಕಿ ಯುವಕರ ದೇಹ ಛಿದ್ರವಾಗಿದೆ.
ನವಲಿ ಕಡೆಯಿಂದ ಗುಡೂರು ಗೆ ತೆರಳುವ ಮಾರ್ಗ ಮಧ್ಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರ ಪೈಕಿ ಓರ್ವ ಮೃತದೇಹ ಛಿದ್ರ ಛಿದ್ರವಾಗಿದ್ದು, ರಸ್ತೆ ತುಂಬ ದೇಹದ ಮಾಂಸ ಚೆಲ್ಲಾಪಿಲ್ಲಿಯಾಗಿದೆ. ಮತ್ತೋರ್ವ ಯುವಕನ ತಲೆ ಛಿದ್ರಗೊಂಡಿದೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



