ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಎಷ್ಟಿದೆ..? ಇಲ್ಲಿದೆ ವಿವರ

0
Spread the love

ಚಿನ್ನದ ಬೆಲೆ ಕಡಿಮೆ ಆಗಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದ ಆಭರಣ ಪ್ರಿಯರು, ಮಹಿಳೆಯರು ಹಾಗೂ ಸಮಾರಂಭಗಳಿಗೆ ಚಿನ್ನ, ಬೆಳ್ಳಿ ಆಭರಣ ಕೊಳ್ಳೋಕೆ ಕಾಯುತ್ತಿದ್ದ ಜನ ಸಾಮಾನ್ಯರಿಗೆ ಬೇಸರ ತಯಾರಿಸುವ ವಿಷಯವಾಗಿದೆ. ಯಾಕಂದ್ರೆ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ.  ಇನ್ನು, ಬೆಲೆ ಎಷ್ಟೇ ಇದ್ದರೂ ಚಿನ್ನ, ಬೆಳ್ಳಿ ವಹಿವಾಟು, ಖರೀದಿ ನಡೆಯುತ್ತಲೇ ಇರುತ್ತದೆ.

Advertisement

ಮದುವೆ ಮುಂತಾದ ಸಮಾರಂಭಗಳು ದೇಶದಲ್ಲಿ ಹೆಚ್ಚಾಗಿ ನಡೆಯುತ್ತಲೇ ಇರುವ ಕಾರಣ ಆಭರಣ ಖರೀದಿಯೂ ಹೆಚ್ಚಾಗಿದೆ. ಅಲ್ಲದೆ, ದೇಶದ ಬಹುತೇಕ ಮಹಿಳೆಯರು ಆಭರಣ ಪ್ರಿಯರಾಗಿದ್ದು, ಈ ಹಿನ್ನೆಲೆ ಬೆಲೆ ಹೆಚ್ಚಿದ್ದರೂ ಆಭರಣ ವ್ಯಾಪಾರ – ವಹಿವಾಟು ನಡೆಯುತ್ತಿರುತ್ತದೆ.

ಇನ್ನೂ ಚಿನ್ನದ ಬೆಲೆ ಗ್ರಾಮ್​​ಗೆ 20 ರೂನಷ್ಟು ಏರಿಕೆ ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 22 ರೂನಷ್ಟು ಹೆಚ್ಚಿದೆ. ಬೆಂಗಳೂರಿನಲ್ಲಿ ಆಭರಣ ಚಿನ್ನದ ಬೆಲೆ ಮೊದಲ ಬಾರಿಗೆ 8,300 ರೂ ಗಡಿ ದಾಟಿ ಹೋಗಿದೆ. ದೆಹಲಿಯಲ್ಲಿ ಚಿನ್ನದ ಬೆಲೆ 8,305 ರೂನಿಂದ 8,325 ರೂಗೆ ಏರಿದೆ. ವಿದೇಶಗಳಲ್ಲಿ ಇಂದು ಕೆಲವೆಡೆ ಚಿನ್ನದ ಬೆಲೆ ಏರಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 83,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 90,660 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 83,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,500 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮಾರ್ಚ್ 20ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 83,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,660 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 67,991 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,050 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 83,100 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,660 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,050 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 83,100 ರೂ
  • ಚೆನ್ನೈ: 83,100 ರೂ
  • ಮುಂಬೈ: 83,100 ರೂ
  • ದೆಹಲಿ: 83,250 ರೂ
  • ಕೋಲ್ಕತಾ: 83,100 ರೂ
  • ಕೇರಳ: 83,100 ರೂ
  • ಅಹ್ಮದಾಬಾದ್: 83,150 ರೂ
  • ಜೈಪುರ್: 83,250 ರೂ
  • ಲಕ್ನೋ: 83,250 ರೂ
  • ಭುವನೇಶ್ವರ್: 83,100 ರೂ

 


Spread the love

LEAVE A REPLY

Please enter your comment!
Please enter your name here