ಡಾ. ಅಂಬೇಡ್ಕರರು ಆಧುನಿಕ ಅರ್ಥಶಾಸ್ತ್ರಜ್ಞರು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಡಾ. ಬಿ.ಆರ್. ಅಂಬೇಡ್ಕರರು ಜಾತಿ ವ್ಯವಸ್ಥೆಯನ್ನು ಈ ದೇಶದಿಂದ ಓಡಿಸಲು ಅನೇಕ ಹೋರಾಟಗಳನ್ನು ಮಾಡಿ, ಶೋಷಿತರಿಗೆ ನ್ಯಾಯ ಕೊಡಿಸುವಲ್ಲಿ ಶ್ರಮಿಸಿದರು ಎಂದು ತೋಂಟದಾರ್ಯ ಮಠದ ಆಡಳಿತಾಧಿಕಾರಿಗಳಾದ ಎಸ್.ಎಸ್. ಪಟ್ಟಣಶೆಟ್ಟರ ಹೇಳಿದರು.

Advertisement

ಪಟ್ಟಣದ ಲಯನ್ಸ್ ಕ್ಲಬ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶೋಷಿತರ ಸಂಘರ್ಷ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ ಮಾತನಾಡಿ, ಅಂಬೇಡ್ಕರರು ಸಾವಿರಾರು ಜನರೊಂದಿಗೆ ಚೌಡಾರ ಕೆರೆ ಪ್ರವೇಶ ಮಾಡಿ ನೀರು ಮುಟ್ಟಿ ಕುಡಿದರು. ದಲಿತರಿಗೆ ಸ್ವಾಭಿಮಾನದಿಂದ ಬದುಕುಲು ಮೊದಲು ಅಡಿಯಿಟ್ಟ ಚಳುವಳಿ ಅದಾಗಿತ್ತು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಎಸ್.ಎಸ್. ಜಿಲ್ಲಾ ಪ್ರಧಾನ ಸಂಚಾಲಕ ಬಾಲರಾಜ ಅರಬರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೊಲೀಸ್ ಅಧಿಕಾರಿ ಡಿ.ವ್ಹಿ. ಪಾಟೀಲ, ಡಿ.ಎಸ್.ಎಸ್. ಮುಖಂಡರಾದ ಬಸವರಾಜ ಕಡೇಮನಿ, ಎಚ್.ಡಿ. ಪೂಜಾರ, ಆನಂದ ಶಿಂಗಾಡಿ, ಶರೀಫ ಬಿಳಿಯಲಿ, ನಗರಸಭೆ ಸದಸ್ಯರಾದ ಲಕ್ಷ್ಮವ್ವ ಭಜಂತ್ರಿ, ಪೂಜಾ ಬೇವೂರು, ನಾಗರಾಜ ಗೋಕಾವಿ, ಹನಮಂತ ಛಲವಾದಿ, ಮೋಹನ ಆಲ್ಮಲಕೇರ, ಸತೀಶ ಪಾಸಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಪ್ರಕಾಶ ಕಲ್ಲೆಕನವರ, ಮುತ್ತಪ್ಪ ಭಜಂತ್ರಿ, ಮಹಾಂತೇಶ ನಡಗೇರಿ, ಪ್ರೀತಿ ಡಂಬಳ, ಚೇತನ ಸೀತಾರಹಳ್ಳಿ, ಫಕ್ಕೀರಪ್ಪ ಮಾದರ, ಯಮನಪ್ಪ ಮೇಗಲಮನಿ, ಶಿವಾನಂದ ದೊಡ್ಡಮನಿ, ರಮೇಶ ಇಟಗಿ, ಪ್ರಮೋದ ಚಲವಾದಿ, ನೀಲಕಂಠ ಕುರಹಟ್ಟಿ, ಚಂದ್ರಶೇಖರ ಜಕ್ಕಮ್ಮನವರ, ಫಕ್ಕೀರೇಶ ಗುಡಿಸಲಮನಿ, ಎಂ.ಎನ್. ದೊಡ್ಡಮನಿ, ಸಂತೋಷ ಮ್ಯಾಗೇರಿ, ಸಂತೋಷ ಜಾಲಣ್ಣವರ, ಮಂಜುನಾಥ ಚಲವಾದಿ, ಹೊನ್ನಪ್ಪ ಸಾಕಿ, ಮಾರುತಿ ಅಂಗಡಿ, ಕೆಂಚಪ್ಪ ಮ್ಯಾಗೇರಿ, ರಮೇಶ ಚಲವಾದಿ, ಹನಮಂತ ಕಿರಟಗೇರಿ, ಯಲ್ಲಪ್ಪ ಭಜಂತ್ರಿ, ಬಸವರಾಜ ಚಲವಾದಿ, ಲಕ್ಷ್ಮಣ ವಡ್ಡರಕಲ್ಲ, ಪರಶುರಾಮ ಕಾಳೆ, ಅನಿಲ ಕಾಳೆ, ಕೋಟ್ರೇಶ ಜಕ್ಕಮ್ಮನವರ, ಲಕ್ಷ್ಮಣ ಭಜಂತ್ರಿ, ಪರಮೇಶ ಕಾಳೆ, ಬಸವರಾಜ ಕಪಲಿ, ಪ್ರಕಾಶ ಗಡ್ಡೆದವರ, ಫಕ್ಕಣ್ಣ ಭಜಂತ್ರಿ ಸೇರಿದಂತೆ ಡಿಎಸ್‌ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಮುತ್ತು ಬಿಳೆಯಲಿ ನಿರೂಪಿಸಿದರು.


Spread the love

LEAVE A REPLY

Please enter your comment!
Please enter your name here