ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಮಿತಿಯ ಆದೇಶದಂತೆ ಗದಗ ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸರ್ವ ಸದಸ್ಯರ ಸಭೆಯನ್ನು ರಾಜ್ಯ ಸಂಘಟನೆಯ ಸಂಚಾಲಕರಾದ ರಾಮಣ್ಣ ದೇವನಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಸಿ, ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಪ್ರಧಾನ ಸಂಚಾಲಕರಾಗಿ ಬಾಲರಾಜ ಅರಬರ ಪುನರಾಯ್ಕೆಯಾದರು. ಜಿಲ್ಲಾ ಸಂಘಟನಾ ಸಂಚಾಲಕರಾಗಿ ನಾಗರಾಜ ಗೋಕಾವಿ, ಮಹಿಳಾ ಘಟಕದ ಸಂಚಾಲಕರಾಗಿ ಪೂಜಾ ಬೇವೂರು, ಸಂಘಟನಾ ಸಂಚಾಲಕರಾಗಿ ಪ್ರೀತಿ ಡಂಬಳ, ಚೇತನ ಸೀತಾರಹಳ್ಳಿ ಆಯ್ಕೆಯಾದರು. ರೋಣ ತಾಲೂಕಾ ಸಂಚಾಲಕರಾಗಿ ಹನುಮಂತ ಚಲವಾದಿ, ನರಗುಂದ ತಾಲೂಕಾ ಸಂಚಾಲಕರಾಗಿ ಪ್ರಕಾಶ್ ಕಲ್ಲೆಕ್ಕನವರ, ಸಂಚಾಲಕರಾಗಿ ಮಹೇಶ ಮಾದರ ಪುನರಾಯ್ಕೆಯಾದರು.
ಈ ಸಂದರ್ಭದಲ್ಲಿ ಮರಿಯಪ್ಪ ನಡಿಗೇರಿ, ಕೆಂಚಪ್ಪ ಮ್ಯಾಗೇರಿ, ಮಾಂತೇಶ್ ನಡೆಗೇರಿ, ಪ್ರಕಾಶ್ ಗಡದವರು, ಕೊಟ್ರೇಶ್ ಜಕ್ಕಮ್ಮನವರು, ಚಂದ್ರು ಜಕ್ಕಮ್ಮನವರು, ಸಂತೋಷ್ ಜಾಲಣ್ಣವರು, ಕುಮಾರ್ ಕಮತರ ಮುಂತಾದವರು ಉಪಸ್ಥಿತರಿದ್ದರು.