ಇಲ್ಲಿ ಪತಿ ಶಾಸಕ…ಪತ್ನಿ ತಹಸೀಲ್ದಾರ್!

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ಬೀದರ್

ಇತ್ತೀಚೆಗಷ್ಟೇ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಶಾಸಕರಾಗಿರುವ ಶರಣು ಸಲಗಾರ ಹಾಗೂ ಅವರ ಪತ್ನ ಜನರ ಮನ ಗೆದ್ದಿದ್ದಾರೆ.

ಶಾಸಕರು ಹಾಗೂ ಅವರ ಪತ್ನಿ ಸಾವಿತ್ರಿ ಸಲಗಾರ ಕೋವಿಡ್ ನ ಈ ಸಂದರ್ಭದಲ್ಲಿ ಕ್ಷೇತ್ರದ ಜನರ ಮಧ್ಯೆ ಕಾರ್ಯ ನಿರ್ವಹಿಸುತ್ತಿರುವಾಗ ನಿಯಮಗಳನ್ನು ಪಾಲಿಸುತ್ತಿರುವ ಪರಿ ಎಲ್ಲರ ಮೆಚ್ಚುಗೆಗೆ ಕಾರಣವಾಗುತ್ತಿದೆ. ಇವರು ಪ್ರಚಾರ ಪ್ರಿಯರಲ್ಲ. ತಾವಾಯಿತು. ತಮ್ಮ ಕೆಲಸವಾಯಿತು. ಮನೆಯಲ್ಲಿ ಪತಿ ಶರಣು ಸಲಗಾರ ಅವರ ಪತ್ನಿ ಸಾವಿತ್ರಿ ಅವರು ತಹಸೀಲ್ದಾರ್. ಪತಿಯ ಹಾಗೂ ಮನೆಯ ಕೆಲಸಗಳನ್ನು ಮುಗಿಸಿಕೊಂಡು ತಹಸೀಲ್ದಾರ್ ಡ್ಯೂಟಿಗೆ ಹಾಜರಾಗುತ್ತಾರೆ.

ಬಹುಶಃ ರಾಜ್ಯದಲ್ಲಿ ಗಂಡ ಶಾಸಕ ಹಾಗೂ ಪತ್ನಿ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಏಕೈಕ ಜೋಡಿ ಇದೇ ಇರಬಹುದು.

ಪ್ರತಿಸಲ ಮಾತನಾಡುವಾಗಲೂ ಸಲಗಾರ ಅವರ ಪತ್ನಿ, ನಾನು ತಹಸೀಲ್ದಾರ್ ಆಗಲು ನನ್ನ ಪತಿ ತುಂಬಾ ಕಷ್ಟ ಪಟ್ಟಿದ್ದಾರೆ. ಇಂತಹ ಪತಿಯನ್ನು ಪಡೆಯಲು ನಾನೇ ಧನ್ಯ ಎಂದು ಹೇಳುತ್ತಿರುತ್ತಾರೆ. ಶಾಸಕರು ಹಾಗೂ ಪತ್ನಿ ಒಂದೇ ಕ್ಷೇತ್ರದಲ್ಲಿ ಇರುವುದರಿಂದಾಗಿ ಕ್ಷೇತ್ರದ ಅಭಿವೃದ್ಧಿಗೂ ಸಾಕಷ್ಟು ಸಹಾಯವಾಗುತ್ತದೆ ಎಂದು ಜನ ಮೆಚ್ಚುಗೆಯ ಮಾತುಗಳನ್ನು ಹೇಳುತ್ತಿದ್ದಾರೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.