ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಎಸ್.ಎಂ. ಕೃಷ್ಣಾ ನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ. 12ರಲ್ಲಿ ಸಾಲುಮರದ ತಿಮ್ಮಕ್ಕ, ಇಕೋ ಕ್ಲಬ್ ಅಡಿಯಲ್ಲಿ ವಿಶ್ವ ಜಲ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಯುವ ಧುರೀಣ ಅನಿಲಕುಮಾರ ಸಿದ್ದಮ್ಮನಹಳ್ಳಿ ನೀರಿನ ಮಹತ್ವದ ಕುರಿತು ಮಾತನಾಡಿ, ಶಾಲೆಯಲ್ಲಿ ಇಂಗು ಗುಂಡಿ ನಿರ್ಮಿಸುವುದಾಗಿ ವಾಗ್ದಾನ ಮಾಡಿದರು.
ಶಾಲಾ ಮುಖ್ಯೋಪಾಧ್ಯಾಯ ಎಚ್.ಆರ್. ಕೋಣಿಮನಿ ನೀರಿನ ಮೂಲಗಳ ಸಂರಕ್ಷಣೆ, ಮಾಲಿನ್ಯದ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಬಸವರಾಜ ಕಡೇಮನಿ ಮಾತನಾಡಿ, ನೀರು ಪೋಲಾಗದಂತೆ ತಡೆಯುವ ಕ್ರಮಗಳ ಬಗ್ಗೆ ತಿಳಿಸಿ, ಶಾಲೆಯಲ್ಲಿ ಮಳೆ ಕೊಯ್ಲು ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಶಾಲೆಯ ವಿಜ್ಞಾನ ಶಿಕ್ಷಕರಾದ ಎಂ.ಕೆ. ಹುಯಿಲಗೋಳ ಪ್ರಾಸ್ತಾವಿಕವಾಗಿ, ಶ್ರಿಯಾ ಗಣೇಶ ಸುಲ್ತಾನಪೂರ, ಶಿವಾನಿ ಮಹಾಂತೇಶ ಸಂಗಮದ ವಿಶ್ವಜಲದಿನದ ಅಂಗವಾಗಿ ಮಾತನಾಡಿದರು. ಗಣ್ಯರಾದ ಎಲ್.ಎಮ್. ಮುಲ್ಲಾನವರ, ದುದ್ದುಗೌಡ ಪಾಟೀಲ, ಶಾಲಾ ಶಿಕ್ಷಕಿಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಿಕ್ಷಕರಾದ ಎಸ್.ಟಿ. ಲಮಾಣಿ ಪ್ರಾರ್ಥಿಸಿದರು. ಎಸ್.ಬಿ. ಕಣಕೆ ನಿರೂಪಿಸಿದರು. ಎಸ್.ಯು. ವಕ್ಕಳದ ವಂದಿಸಿದರು.


