ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯ ಹುಟ್ಟುವಾಗ ಬರೀಗೈ. ಆದರೆ ಕೊನೆಯಲ್ಲಿ ಒಳ್ಳೆಯ ಹೆಸರಿನೊಂದಿಗೆ ಹೋಗಬೇಕು. ಹೆಸರು ಅಕ್ಷರಗಳಿಂದಿರದೇ ಅದರಲ್ಲಿ ಇತಿಹಾಸ ಇರಬೇಕು. ಮಹಿಳೆಯರು ಇಂತಹ ಸಾಧನೆಯ ಹೂವುಗಳಾಗಬೇಕೆಂದು ಗಜೇಂದ್ರಗಡದ ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.
ಅವರು ಗದುಗಿನ ಮಹೇಶ್ವರಿ ವಿವಿಧೋದ್ದೇಶಗಳ ಮಹಿಳಾ ಮಂಡಳದಿAದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ತಮ್ಮ ಮನಸ್ಸಿನಲ್ಲಿರುವ ಕೀಳರಿಮೆ ಮತ್ತು ಭಯವನ್ನು ತಗೆದುಹಾಕಿದರೆ ಅದ್ಭುತವಾದ ಸಾಧನೆ ಮಾಡಬಲ್ಲರು. ಮುಖ್ಯವಾಗಿ ಆರ್ಥಿಕವಾಗಿ ಸಬಲರಾಗಬೇಕು. ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆ ಸಂಸ್ಕೃತಿ-ಧರ್ಮ-ನೈತಿಕ ಮೌಲ್ಯಗಳೊಂದಿಗೆ ತನ್ನ ಕುಟುಂಬವನ್ನು ಉನ್ನತಿಯತ್ತ ಕೊಂಡೊಯ್ಯುವ ಜವಾಬ್ದಾರಿ ಹೊಂದಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಜಯಶ್ರೀ ಹಿರೇಮಠ ಮಾತನಾಡಿ, ಮಹಿಳಾ ಸಂಘಟನೆಗಳು ಮಹಿಳೆಯರನ್ನು ಜಾಗೃತಗೊಳಿಸಿ ಅವರನ್ನು ಶಕ್ತರನ್ನಾಗಿಸುತ್ತವೆ. ತಮ್ಮಲ್ಲಿ ತರಬೇತಿ ಪಡೆದ ನೂರಾರು ಮಹಿಳೆಯರು ಸ್ವ-ಉದ್ಯೋಗಿಗಳಾಗಿರುವುದು ಸಂತೋಷ ತಂದಿದೆ ಎಂದರು.
ಸಾಧಕ ಮಹಿಳೆಯರಾದ ಲಲಿತಾ ವಸ್ತçದ, ಸರೋಜಾ ಘೋರ್ಪಡೆ, ಅಕ್ಕಮ್ಮ ಗುರಸ್ವಾಮಿಮಠ ವೇದಿಕೆಯ ಮೇಲಿದ್ದರು. ಇದೇ ಸಂದರ್ಭದಲ್ಲಿ ಮಹಿಳಾ ಉದ್ಯಮಿಗಳಾದ ಹೊಂಬಳದ ವೀಣಾ ಬೈಲಿ, ಮುಳಗುಂದದ ರೇಣುಕಾ ಬಿಜಾಪೂರ, ಮುಂಡರಗಿಯ ರೇಣುಕಾ ಹಂದ್ರಾಳ, ಬೆಟಗೇರಿಯ ಸಾವಿತ್ರಿ ಚಲವಾದಿ, ಗದುಗಿನ ಉಷಾ ನಾಲವಾಡ, ಮಲ್ಲಸಮುದ್ರದ ಅನ್ನಪೂರ್ಣೆಶ್ವರಿ ಎಲಿ, ಸುಗ್ನಳ್ಳಿಯ ಸುಜಾತಾ ಜಕ್ಕಲಿ, ಗದಗ ಗ್ರಾಮೀಣ ವಲಯದ ಲಲಿತಾ ಸಂಗನಾಳ, ಮಂಜುಳಾ ಮಲ್ಲಾಪೂರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮೇಘಾ ಹೂಗಾರ, ಆಶಾ ದೇಸಾಯಿ, ಆಫ್ರೀನ್ ಭಾನೂ ಈಟಿ, ತೃಪ್ತಿ ಕೋರಿಶೆಟ್ಟರ, ದುರ್ಗಮ್ಮ ಪೂಜಾರ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದರು.
ಪುಷ್ಪಾ ಮುನವಳ್ಳಿ ಹಾಗೂ ರಶ್ಮಿಕಾ ಹಿರೇಮಠ ಪ್ರಾರ್ಥಿಸಿದರು. ನಿರ್ಮಲಾ ಹೂಗಾರ ಸ್ವಾಗತಿಸಿದರು. ಗೀತಾ ಚವ್ಹಾಣ್ ಪರಿಚಯಿಸಿದರು. ಮಂಜುಳಾ ಸಂಕನಗೌಡ್ರ ನಿರೂಪಿಸಿದರು. ತಸ್ಲಿಂ ಸೊರಟೂರ ವಂದಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಅಣ್ಣಿಗೇರಿಯ ಜ್ಯೋತಿ ಮಹಿಳಾ ಮಂಡಳದ ಅಧ್ಯಕ್ಷೆ ಶೋಭಾದೇವಿ ಸಿಕ್ಕೇದೇಸಾಯಿ ಮಾತನಾಡಿ, ಮಹಿಳಾ ಶಕ್ತಿ ಅಗಾಧವಾಗಿದೆ. ಮಹಿಳೆಯರು ಶೈಕ್ಷಣಿಕವಾಗಿ ಮುನ್ನಡೆದು ಗೃಹ-ಕೈಗಾರಿಕೆಯತ್ತಲೂ ಗಮನಹರಿಸಿ ಒಳ್ಳೆಯ ಉದ್ಯೋಗಿಗಳಾಗಬೇಕು ಎಂದರು.


