HomeCrime NewsSSLC ಪರೀಕ್ಷೆಗೆ ಹೊರಟಿದ್ದಾಗ ರಸ್ತೆ ಅಪಘಾತ: ಬೈಕ್ʼಗೆ ಲಾರಿ ಡಿಕ್ಕಿ - ತಂದೆ ಸ್ಥಳದಲ್ಲೇ ಸಾವು

SSLC ಪರೀಕ್ಷೆಗೆ ಹೊರಟಿದ್ದಾಗ ರಸ್ತೆ ಅಪಘಾತ: ಬೈಕ್ʼಗೆ ಲಾರಿ ಡಿಕ್ಕಿ – ತಂದೆ ಸ್ಥಳದಲ್ಲೇ ಸಾವು

For Dai;y Updates Join Our whatsapp Group

ವಿಜಯಪುರ: ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕಗ್ಗೋಡ ಗ್ರಾಮದ ಬಳಿಯ 52ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ.  ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗುವಾಗ ಈ ಅವಘಡ ಸಂಭವಿಸಿದೆ.

ವೆಂಕು ಚವ್ಹಾಣ ಮೃತ ಸವಾರ. ಪುತ್ರಿಯರಾದ ಐಶ್ವರ್ಯಾ, ಪ್ರೀತಿ ಹಾಗೂ ಪಕ್ಕದ ಮನೆ ನಿವಾಸಿ ಶ್ವೇತಾ ರಾಠೋಡ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಮಟಗಿ ತಾಂಡಾದಿಂದ ತಮ್ಮ ಇಬ್ಬರು ಮಕ್ಕಳು ಹಾಗೂ ಪಕ್ಕದ ಮನೆ ನಿವಾಸಿಯನ್ನು ಕಗ್ಗೋಡದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದರು.

ಈ ವೇಳೆ ತೆಲಂಗಾಣ ಮೂಲದ TS15UA8055 ನಂಬರ್ ಲಾರಿ ಹಾಗೂ KA28HL5603 ನಂಬರಿನ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಸದ್ಯ ಗಾಯಾಳುಗಳನ್ನು ವಿಜಯಪುರ  ನಗರದ ಬಿಎಲ್‌ಡಿಇ ಆಸ್ಪತ್ರೆಗೆ ರವಾನೆ ಮಾಡಲಾಗಿದೆ,ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img