ರಜತ್ ಹಾಗೂ ವಿನಯ್ ಇತ್ತೀಚೆಗೆ ಲಾಂಗ್ ತೋರಿಸಿ ರೀಲ್ಸ್ ಮಾಡಿದ್ದರು. ಆ ಬಳಿಕ ಅವರನ್ನು ಬಂಧಿಸಲಾಯಿತು. ರಾತ್ರಿ ವೇಳೆಗೆ ಸ್ಟೇಷನ್ ಬೇಲ್ ನೀಡಿ ಅವರನ್ನು ಬಿಡುಗಡೆ ಮಾಡಲಾಗಿದೆ. ಈಗ ಬಸವೇಶ್ವರ ನಗರದ ಪೊಲೀಸ್ ಠಾಣೆಗೆ ಜೊತೆಯಾಗಿ ವಿನಯ್ ಮತ್ತು ರಜತ್ ವಿಚಾರಣೆಗೆ ಹಾಜರಾಗಿದ್ದಾರೆ.
ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ನಿನ್ನೆ ವಿನಯ್ ಮತ್ತು ರಜತ್‌ರನ್ನು ವಿಚಾರಣೆಯ ವೇಳೆಯೇ ಬಂಧಿಸಲಾಗಿತ್ತು. ಆ ನಂತರ ಇಬ್ಬರನ್ನೂ ಮಧ್ಯರಾತ್ರಿಯೇ ಬಿಡುಗಡೆ ಮಾಡಲಾಯಿತು. ಈ ಹಿನ್ನೆಲೆ ಪೊಲೀಸರ ಸೂಚನೆಯಂತೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.
ಅಂದಹಾಗೆ, ಮಚ್ಚು ಹಿಡಿದರುವ ರೀಲ್‌ನಲ್ಲಿ ‘ಕರಿಯ’ ಚಿತ್ರದ ದರ್ಶನ್ ಸ್ಟೈಲ್‌ನಲ್ಲಿ ರಜತ್ ಕಾಣಿಸಿಕೊಂಡಿದ್ರೆ, ಪುಷ್ಪರಾಜ್ ಲುಕ್‌ನಲ್ಲಿ ವಿನಯ್ ಕಾಣಿಸಿಕೊಂಡು ಒಟ್ಟಾಗಿ ರೀಲ್ಸ್ ಮಾಡಿದ್ದರು. ಈ ರೀಲ್ಸ್ ಇದೀಗ ಅವರಿಗೆ ಸಂಕಷ್ಟ ತಂದಿದೆ. ಲಾಂಗ್ ಹಿಡಿದಿಕ್ಕೆ ಇಬ್ಬರ ಮೇಲೆಯೂ ಎಫ್‌ಐಆರ್ ದಾಖಲಾಗಿದೆ. ಸದ್ಯ ಈ ಸಂಬಂಧ ರಜತ್ ಮತ್ತು ವಿನಯ್ ಬಸವೇಶ್ವರ ನಗರದ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.