Belagavi: ಪಿ.ಜಿಯಲ್ಲಿ ನೇಣಿಗೆ ಕೊರಳೊಡ್ಡಿದ ಎಂಬಿಎ ಪದವೀಧರೆ!

0
Spread the love

ಬೆಳಗಾವಿ:- ಪಿ.ಜಿಯಲ್ಲಿ ನೇಣು ಬಿಗಿದುಕೊಂಡು ಎಂಬಿಎ ಪದವೀಧರೆಯೊಬ್ಬಳು ಸೂಸೈಡ್ ಮಾಡಿಕೊಂಡ ಘಟನೆ ಬೆಳಗಾವಿಯಲ್ಲಿ ಜರುಗಿದೆ.

Advertisement

ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡ ಯುವತಿ. ವಿಜಯಪುರದಲ್ಲಿಯೇ ಎಂಬಿಎ ಪದವಿ ಓದಿದ್ದ ಐಶ್ವರ್ಯ ಕೆಲಸಕ್ಕಾಗಿ ಬೆಳಗಾವಿಗೆ ಬಂದಿದ್ದಳು. ಬೆಳಗಾವಿಯ ಕಂಪನಿಯೊಂದರಲ್ಲಿ ಕಲಿಕಾ ತರಬೇತಿಯಲ್ಲಿದ್ದ ಐಶ್ವರ್ಯ ಕಳೆದ ಮೂರು ತಿಂಗಳಿನಿಂದ ನೆಹರು ನಗರದ ಪಿ.ಜಿಯಲ್ಲಿ ವಾಸವಿದ್ದಳು. ಆತ್ಮಹತ್ಯೆಗೆ ಮುನ್ನ ಗೆಳತಿಯೊಂದಿಗೆ ಮಾತನಾಡಿ ರೂಂಗೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾತ್ರವಲ್ಲದೇ ಯುವತಿ ಸ್ನೇಹಿತ ಕೂಡ ಪಿ.ಜಿಗೆ ಬಂದು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲವ್ ಬ್ರೇಕಪ್ ಯುವತಿ ಆತ್ಮಹತ್ಯೆಗೆ ಕಾರಣವಾಯ್ತಾ ಎಂಬ ಶಂಕೆ ವ್ಯಕ್ತವಾಗಿದೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಐಶ್ವರ್ಯ ಮೊಬೈಲ್‌ನ ಕಾಲ್ ಡೀಟೈಲ್ಸ್ ಪರಿಶೀಲನೆಗೆ ಮುಂದಾಗಿದ್ದಾರೆ. ಅಲ್ಲದೇ ಪಿಜಿಗೆ ಬಂದು ಹೋದ ಸ್ನೇಹಿತನಿಗಾಗಿ ಶೋಧ ನಡೆಸುತ್ತಿದ್ದಾರೆ. ಐಶ್ವರ್ಯ ಆತ್ಮಹತ್ಯೆಗೆ ಅಸಲಿ ಕಾರಣ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.


Spread the love

LEAVE A REPLY

Please enter your comment!
Please enter your name here