ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಯುಗಾದಿ, ರಂಜಾನ್ ಹಬ್ಬಕ್ಕೆ 2000 ಹೆಚ್ಚುವರಿ KSRTC ಬಸ್‌

0
Spread the love

ಬೆಂಗಳೂರು: ಯುಗಾದಿ, ರಂಜಾನ್, ದೀರ್ಘ ವಾರಾಂತ್ಯ ಹೀಗೆ ಸಾಲು ರಜೆಗಳಲ್ಲಿ ಊರುಗಳಿಗೆ ತೆರಳಲು ಹಾಗೂ ಪ್ರವಾಸಕ್ಕೆ ಯೋಜನೆ ಹಾಕಿಕೊಂಡವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶುಭ ಸುದ್ದಿ ನೀಡಿದೆ. ಹಬ್ಬದ ಪ್ರಯುಕ್ತ 2000 ಹೆಚ್ಚುವರಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ. ಈ ವಿಶೇಷ ಬಸ್‌ಗಳು ಮಾರ್ಚ್‌ 28, 29 ಹಾಗೂ 30 ರಂದು ಮೂರು ದಿನ ಬೆಂಗಳೂರಿನಿಂದ ರಾಜ್ಯ, ಹೊರ ರಾಜ್ಯದ ಪ್ರಮುಖ ಸ್ಥಳಗಳಿಗೆ ಸಂಚಾರ ನಡೆಸಲಿದ್ದು,

Advertisement

ಮುಂಗಡ ಬುಕ್ಕಿಂಗ್‌ಗೆ ಅವಕಾಶವಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಕಟಣೆ ನೀಡಿದ್ದು, ಮಾರ್ಚ್‌ 30 ರಂದು ಚಂದ್ರಮಾನ ಯುಗಾದಿ, ಮಾರ್ಚ್‌ 31 ರಂದು ರಂಜಾನ್ ಹಬ್ಬವಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಿಂದ ಪ್ರಯಾಣಿಕರು ತಮ್ಮ ಊರುಗಳಿಗೆ ಸಂಚಾರ ನಡೆಸುತ್ತಾರೆ. ಇವರ ಅನುಕೂಲಕ್ಕಾಗಿ ವಿಶೇಷ ಬಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.

ಮಾರ್ಚ್ 30ರಂದು ಚಂದ್ರಮಾನ ಯುಗಾದಿ, ಮಾ.31ರಂದು ರಂಜಾನ್ ಹಬ್ಬವಿರುವುದರಿಂದ ಕರ್ನಾಟಕ ರಸ್ತೆ ಸಾರಿಗೆ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಾ.28 ರಿಂದ ಮಾ.30ರವರೆಗೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ 2000 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ನಂತರ ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಾಪಸ್ ಆಗುವವರೆಗೆ ಮಾರ್ಚ್ 31ರಂದು ವಿಶೇಷ ಬಸ್​ಗಳನ್ನು ಬಿಡಲಾಗಿದೆ.

 


Spread the love

LEAVE A REPLY

Please enter your comment!
Please enter your name here