ಬೆಂಗಳೂರು: ಬ್ಲ್ಯಾಕ್‌ಮೇಲ್ ಮಾಡೋರಿಗೆ ನಾವು ಬೆಲೆ ಕೊಡೋದು ಅಂತ ಬಿಜೆಪಿ ಸ್ಪಷ್ಟಪಡಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್ ಉಚ್ಚಾಟನೆ ಬಗ್ಗೆ ಮಾತನಾಡಿದ ಅವರು,
Advertisement
ಯತ್ನಾಳ್ ಅವರು ಕುಟುಂಬ ರಾಜಕೀಯ, ಭ್ರಷ್ಟರ ವಿರುದ್ದ ಹೋರಾಟ ಮಾಡ್ತಿದ್ದರು. ಈಗ ಯತ್ನಾಳ್ ಅವರ ಬಿಜೆಪಿ ಶುದ್ಧೀಕರಣ ಹೋರಾಟಕ್ಕೆ ಕೇಂದ್ರದ ಹೈಕಮಾಂಡ್ ಜಟ್ಕಾ ಕಟ್ ಹೊಡೆದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕೇಂದ್ರ ಬಿಜೆಪಿ ನಾಯಕರು ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ. ನಮಗೆ ಭ್ರಷ್ಟಾಚಾರ, ಕುಟುಂಬ ರಾಜಕೀಯ ಇಷ್ಟ ಎಂದು ತಿಳಿಸಿದ್ದಾರೆ. ಫೋಕ್ಸೋ ಆರೋಪ ಇರೋರ ನೇತ್ರತ್ವದಲ್ಲಿ ಚುನಾವಣೆ ಮಾಡ್ತೀವಿ ಎಂಬ ಸಂದೇಶ ಕೊಟ್ಟಿದ್ದಾರೆ. ಬ್ಲ್ಯಾಕ್‌ಮೇಲ್ ಮಾಡೋರಿಗೆ ನಾವು ಬೆಲೆ ಕೊಡೋದು ಅಂತ ಬಿಜೆಪಿ ಸ್ಪಷ್ಟಪಡಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.