ಹಾವೇರಿ: ಅಡವಿಟ್ಟ ಬೈಕ್ ವಾಪಾಸ್ ಕೇಳಲು ಹೋಗಿದ್ದಕ್ಕೆ ಗಲಾಟೆ ಮಾಡಿದ್ದಲ್ಲದೆ ಮೂವರಿಗೆ ಚಾಕು ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾವೇರಿ ಸುಭಾಷ್ ವೃತ್ತದಲ್ಲಿ ನಡೆದಿದೆ.
ಇರ್ಫಾನ್ ಉದ್ದೂರು (29), ರಿಯಾಜ್ (30), ಮಹಮ್ಮದ್ ಗೌಸ್ (56) ಎಂಬ ವ್ಯಕ್ತಿಗಳಿಗೆ ಗಾಯಗಳಾಗಿದ್ದು, ನಿಹಾಲ್ ಅಹ್ಮದ್ ಜಾಫರ್(26) ಚಾಕು ಇರಿದ ಆರೋಪಿಯಾಗಿದ್ದಾನೆ.
8 ತಿಂಗಳ ಹಿಂದೆ 50 ಸಾವಿರ ರೂ. ಗೆ ಇರ್ಫಾನ್ ಬೈಕ್ ಅಡವಿಟ್ಟಿದ್ದರು. ಈಗ ಬೈಕ್ ವಾಪಾಸು ಕೇಳಲು ಹೋದಾಗ ಆಶೀಫ್ 80 ಸಾವಿರ ಕೊಟ್ಟು ಬೈಕ್ ತೆಗೆದುಕೊಂಡು ಹೋಗು ಎಂದು ಅವಾಜ್ ಹಾಕಿ ಗಲಾಟೆ ಮಾಡಿದ್ದಾನೆ. ಮಾತಿಗೆ ಮಾತು ಬೆಳೆದು, ನಿಹಾಲ್ ಅನ್ನುವ ಯುವಕನ್ನನ್ನ ಕಳಿಸಿ ಮೂವರಿಗೆ ಚಾಕು ಹಾಕಿಸಿದ್ದಾನೆ.
ಇನ್ನೂ ಗಾಯಾಗೊಂಡ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಹಾವೇರಿ ನಗರ ಪೊಲೀಸರು ಆರೋಪಿ ನಿಹಾಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


