ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ ಆರೋಪಿ ವೀರಯ್ಯ ತಂದೆ ಶಿವಯ್ಯ ಹಿರೇಮಠ ಈತನಿಗೆ ಜಿಲ್ಲಾ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ.
ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇಮಲ್ಲಾಪುರ ಗ್ರಾಮದ ವೀರಯ್ಯ ತಂದೆ ಶಿವಯ್ಯ ಹಿರೇಮಠ ಈತ 2004ರ ಡಿಸೆಂಬರ್ 8ರಂದು ಪತ್ನಿ ಈರಮ್ಮ ಹಿರೇಮಠ ಎಂಬುವವಳನ್ನು ಶೀಲ ಶಂಕಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು.
ಪ್ರಕರಣದ ಸಾಕ್ಷಿ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾದೀಶರಾದ ಬಸವರಾಜ ಅವರು ಪ್ರಕರಣ ರುಜುವಾತಾಗಿದ್ದರಿಂದ ವೀರಯ್ಯ ಹಿರೇಮಠನಿಗೆ ಮಾರ್ಚ್ 28ರಂದು ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ ದಂಡದ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರಕಾರದ ಪರವಾಗಿ ಗದಗ ಅಭಿಯೋಜಕರಾದ ಸವಿತಾ ಎಂ.ಶಿಗ್ಲಿ ವಾದ ಮಂಡಿಸಿದ್ದರು.



