ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಶ್ರೀ ಗಂಜಿಬಸವೇಶ್ವರ ದೇವರ 63ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಗಂಜೀ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಸಭಾಧ್ಯಕ್ಷರನ್ನಾಗಿ ಕರಬಸಯ್ಯ ಬಸಯ್ಯ ನಾಲ್ವತ್ತ್ವಾಡಮಠ ಇವರನ್ನು ಆಯ್ಕೆ ಮಾಡಲಾಯಿತು.
ಕಳೆದ ವರ್ಷದ 2024ರ ಲೆಕ್ಕ ತಪಾಸಣೆಯ ಜೊತೆಗೆ ಜಾತ್ರಾ ಮಹೋತ್ಸವದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರಶಾಂತ ಶಂಕ್ರಯ್ಯ ಶಾಬಾದಿಮಠ, ಉಪಾಧ್ಯಕ್ಷರಾಗಿ ಸೋಮಣ್ಣ ಕೊಟ್ರಪ್ಪ ಪುರದ, ಕೋಶಾಧ್ಯಕ್ಷರಾಗಿ ಶಂಕರ ಅಂದಾನಪ್ಪ ಕರಭಿಷ್ಟಿ, ಕಾರ್ಯದರ್ಶಿಯಾಗಿ ಸಿದ್ಧಲಿಂಗೇಶ ಬಸಪ್ಪ ಸಂಗನಾಳ, ಸಹಕಾರ್ಯದರ್ಶಿಯನ್ನಾಗಿ ಪ್ರಶಾಂತ ಮಲ್ಲೇಶಪ್ಪ ಮುದೇಗೊಣ್ಣನವರ ಇವರನ್ನು ಆಯ್ಕೆ ಮಾಡಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಓಣಿಯ ಹಿರಿಯರಾದ ನಿಂಗಪ್ಪ ಪಡಗದ, ಜಿ.ಎಲ್. ಮರಿಗೌಡ್ರ, ರುದ್ರಪ್ಪ ಕಲಬಂಡಿ, ಫಕ್ಕೀರಗೌಡ ಮರಿಗೌಡ್ರ, ಈರಣ್ಣ ಕರಭಿಷ್ಟಿ, ರಮೇಶ ಕುರ್ತಕೋಟಿ, ಬಸಯ್ಯ ಹಿರೇಮಠ, ಬಸಪ್ಪ ಪಡಗದ, ಕುಮಾರ ವಿಭೂತಿಮಠ, ಮಂಜುನಾಥ ಲಕ್ಕುಂಡಿ, ಸಿದ್ದಪ್ಪ ಹೊಂಬಾಳಿ, ಸಿದ್ರಾಮಪ್ಪ ಹುಂಬಿ, ಹನಮಂತ ಗಿಡ್ಡಹನಮಣ್ಣವರ, ರಾಜು ಖೋಡೆ, ನಾಗಪ್ಪ ಗುಗ್ಗರಿ, ಬಸವನಗೌಡ ಉಮಚಗಿ, ಅಂದಯ್ಯ ವಿಭೂತಿಮಠ, ಹನಮಂತ ಗಿಡ್ಡಹನಮಣ್ಣವರ, ಹುಚ್ಚಪ್ಪ ಐಹೊಳಿ, ಸುನೀಲ ಕೊತಬಾಳ, ಪ್ರಶಾಂತ ಮುದೇಗೊಣ್ಣವರ, ಬಸವರಾಜ ನಾಯ್ಕರ, ಸಂಗಪ್ಪ ಸಂಗನಾಳ, ಶಶಿ ಅಗಸಿಬಾಗಿಲು, ಶಿವಪ್ಪ ಹಳ್ಳಿಕೇರಿ, ಶರಣಪ್ಪ ನಾಗೂರ, ರಾಚಪ್ಪ ಲಕ್ಕುಂಡಿ, ಕುಮಾರ ಖೋಡೆ, ವೀರೇಶ ಸಾಲಿಮಠ, ಪುಟ್ಟರಾಜ ಮಣಕವಾಡ, ಗಣೇಶ ಲಕ್ಕುಂಡಿ, ನಾಗಪ್ಪ ಹುಂಬಿ, ಬಸವರಾಜ ತೋಟದ, ಮುದಕಪ್ಪ ಕಬನೂರ, ಎಸ್.ಸಿ. ಬಳಗಾನೂರಮಠ, ರಾಮಣ್ಣ ಜಡಿ ಮುಂತಾದವರಿದ್ದರು.
ಜಾತ್ರಾ ಮಹೋತ್ಸವದ ಸಲಹಾ ಸಮಿತಿಗೆ ಪರಪ್ಪ ಫಕ್ಕೀರಪ್ಪ ಕಮತರ, ಸೋಮು ಮುಳಗುಂದ, ಪ್ರಶಾಂತ ನರೇಗಲ್ಲ, ಸತೀಶ ಗಿಡ್ಡಹನಮಣ್ಣವರ, ಶಿವಪ್ಪ ಮುಳ್ಳಾಳ, ವೀರಣ್ಣ ಗಡಗಿ, ಸಿದ್ದು ಗಾಣಿಗೇರ, ಸಿದ್ದು ಉಮಚಗಿ, ಪ್ರಭು ಕಲಬಂಡಿ, ಶಂಕರ ಕರಭಿಷ್ಟಿ, ಶಿವಾನಂದ ಹೂಗಾರ, ಮಲ್ಲಪ್ಪ ಉಮಚಗಿ, ಬಸವರಾಜ ನಾಯ್ಕರ, ಸಿದ್ದಲಿಂಗೇಶ ಸಂಗನಾಳ, ಶರಣಪ್ಪ ತಾಂಬೆ, ಮಲ್ಲಪ್ಪ ಕರಭಿಷ್ಟಿ, ಮಂಜುನಾಥ ಲಕ್ಷೆಟ್ಟಿ, ಬಸವರಾಜ ಕಬನೂರ, ಬಸಪ್ಪ ಪಡಗದ ಆಯ್ಕೆಯಾದರು.


