ಬೆಂಗಳೂರು: ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣ ಸಂಬಂಧ ರಾಜೇಂದ್ರ ಕ್ಯಾರಸಂದ್ರದಲ್ಲಿ ದೂರು ಕೊಟ್ಟಿದ್ದಾರೆ.
Advertisement
ಪೊಲೀಸರೆ ತನಿಖೆ ಮಾಡಿ ಆ ನಾಯಕ ಯಾರು ಅಂತ ಹೇಳಬೇಕು. ಯಾರ ಮೇಲೂ ಆರೋಪ ಮಾಡೋಕೆ ನಮಗೆ ಅಧಿಕಾರ ಇಲ್ಲ. ಕಾದು ನೋಡೋಣ ಎಂದಿದ್ದಾರೆ.
ಇನ್ನೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರನ್ನು ಮೂವತ್ತು ವರ್ಷಗಳಿಂದ ಭೇಟಿಯಾಗುತ್ತಿದ್ದೇನೆ, ಅದರಲ್ಲಿ ವಿಶೇಷವೇನೂ ಇಲ್ಲ, ಅವರನ್ನು ಯಾಕೆ ಭೇಟಿಯಾಗಿದ್ದು ಅಂತ ನಿನ್ನೆಯೇ ಎಲ್ಲವನ್ನೂ ಹೇಳಿದ್ದೇನೆ, ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆಯೂ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.