ಗದಗ:– ಯುಗಾದಿ ಹಬ್ಬದ ಸಂಭ್ರಮದ ಹೊತ್ತಲ್ಲೇ ಗದಗ ನಗರದಲ್ಲಿ ಅಗ್ನಿ ದುರಂತ ಸಂಭವಿಸಿದೆ.
ಗದಗ ನಗರದ ಜವಳಗಲ್ಲಿ ಬಳಿ ಇರುವ ಬಾರ್ಸಿಲೋನಾ ಬಟ್ಟೆ ಅಂಗಡಿ ಹಾಗೂ ನೆಲಮಹಡಿಯಲ್ಲಿದ್ದ ಎಲೆಕ್ಟ್ರಾನಿಕ್ಸ್ ಗೋಡೌನ್ ಗೆ ತಡರಾತ್ರಿ ಬೆಂಕಿ ತಗುಲಿದ್ದು, ಘಟನೆ ಪರಿಣಾಮ ಫ್ರಿಜ್, ವಾಶಿಂಗ್ ಮಶಿನ್, ಸ್ಪೀಕರ್ ಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟು ಭಸ್ಮವಾಗಿದೆ. ಶಾರ್ಟ್ ಸಕ್ಯೂ೯ಟ್ ನಿಂದ ಬೆಂಕಿ ಹೊತ್ತಿ ಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಉಮೇದಮಲ್ಲ ಎಂಬುವವರಿಗೆ ಸೇರಿದ ಅಂಗಡಿ ಇದಾಗಿದ್ದು, ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



