ಚಕ್ಕೋತ ಹಣ್ಣಿನಲ್ಲಿರುವ ಪೋಷಕಾಂಶಗಳು ಆರೋಗ್ಯಕರ ಚರ್ಮವನ್ನು ಉತ್ತೇಜಿಸಲು ಮತ್ತು ವಿವಿಧ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ತೂಕ ನಿರ್ವಹಣೆಯಲ್ಲಿ ಈ ಹಣ್ಣು ಮುಖ್ಯ ಪಾತ್ರ ವಹಿಸುತ್ತದೆ. ಚಕೋತ ಹಣ್ಣುಗಳು ಉಪೋಷ್ಣವಲಯದ ಹವಾಮಾನದಲ್ಲಿ ಮರಗಳಲ್ಲಿ ಬೆಳೆಯುವ ಸಿಟ್ರಸ್ ಜಾತಿಯ ಹಣ್ಣುಗಳಾಗಿವೆ. ಅವುಗಳು ಮೃದುವಾದ, ಸಣ್ಣದಾದ ಚೆಂಡುಗಳ ಗಾತ್ರವನ್ನು ಹೊಂದಿರುತ್ತವೆ. ಇದರೊಳಗಿನ ಮಾಂಸವು ಗುಲಾಬಿ, ತಿಳಿ ಹಳದಿ ಮತ್ತು ಗಾಢ ಕೆಂಪು ಸೇರಿದಂತೆ ವಿವಿಧ ಬಣ್ಣಗಳಲ್ಲಿ ಇರುತ್ತದೆ. ಚಕ್ಕೋತ ಹಣ್ಣುಗಳು ತುಂಬಾ ಆಮ್ಲೀಯವಾಗಿರುತ್ತವೆ.
ಇನ್ನೂ ಚಕ್ಕೋತ ಹಣ್ಣು ತಿನ್ನುವುದರಿಂದ ದೇಹಕ್ಕೆ ಹಲವಾರು ಲಾಭಗಳಿವೆ. ಈ ಚಕ್ಕೋತ ಹಣ್ಣು ದಕ್ಷಿಣ ಪೂರ್ವ ಏಷಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಒಗರು ಮತ್ತು ಸ್ವಲ್ಪ ಕಹಿಮಿಶ್ರಿತ ಇರುವುದರಿಂದ ಇದನ್ನು ಸಾಕಷ್ಟು ಮಂದು ತಿನ್ನಲು ಇಷ್ಟ ಪಡುವುದಿಲ್ಲ. ಆದ್ರೆ ಈ ಚಕ್ಕೋತ ಹಣ್ಣು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳನ್ನು ನೀಡುತ್ತದೆ. ಸಿಹಿ ಮತ್ತು ಹುಳಿ ಮಿಶ್ರಿತ ಇರುವ ಈ ಹಣ್ಣನ್ನು ಆಂಗ್ಲ ಭಾಷೆಯಲ್ಲಿ ಗ್ರೇಪ್ ಫ್ರೂಟ್ ಅಥವಾ ಪೊಮೆಲಾ ಎಂದು ಕರೆಯುತ್ತಾರೆ.
ಇದು ನಮ್ಮ ದೇಹಕ್ಕೆ ಅನೇಕ ರೀತಿಯ ಪೋಷಕಾಂಶವನ್ನು ಒದಗಿಸುತ್ತದೆ. ಅಲ್ಲದೇ ಹೃದಯವನ್ನು ಬಲಪಡಿಸುವುದಲ್ಲದೇ, ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಗೆ ಕೂಡ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಅಷ್ಟೇ ಅಲ್ಲದೇ ಕಿಡ್ನಿ ಸ್ಟೋನ್ ಕರಗಿಸುವ ಸಾಮರ್ಥ್ಯ ಹೊಂದಿದೆ. ಕಿಡ್ನಿ ಸ್ಟೋನ್ ಇದ್ದವರು ಚಕ್ಕೋತ ಹಣ್ಣನ್ನು ತಿಂದರೆ ಮೂತ್ರ ವಿಸರ್ಜನೆ ಮೂಲಕ ಆಚೆ ಬರುವಂತೆ ಸಹಾಯ ಮಾಡುತ್ತದೆ. ಮತ್ತೆ ಕಿಡ್ನಿ ಸ್ಟೋನ್ ಬಾರದೆ ಇರೋ ಹಾಗೆ ಮಾಡುತ್ತೆ. ರೋಗನಿರೋಧಕ ಶಕ್ತಿ ಹೆಚ್ಚಿಸುವುದಕ್ಕೆ ಸಹಾಯ ಮಾಡುತ್ತದೆ. ಇದು ಶರೀರದಲ್ಲಿ ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್‌ಗಳ ಪ್ರಮಾಣವನ್ನು ಹೆಚ್ಚಿಸುತ್ತದೆ. ಬಹುಮುಖ್ಯವಾಗಿ ಹಲವಾರು ರೀತಿಯ ಕ್ಯಾನ್ಸರ್ ರೋಗ ಬಾರದಂತೆ ತಡೆದು ಹಾಕುತ್ತದೆ. ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಬ್ಲಡ್ ಪ್ರೆಶರ್ ಅನ್ನು ಕಂಟ್ರೋಲ್ ಮಾಡುತ್ತದೆ. ಚಕ್ಕೋತ ಹಣ್ಣು ಶರೀರದ ತೂಕವನ್ನು ನಿಯಂತ್ರಿಸುತ್ತದೆ. ಇಷ್ಟೆಲ್ಲಾ ಪ್ರಯೋಜನವನ್ನು ಈ ಹಣ್ಣು ನೀಡುತ್ತದೆ.