ಕೋಲಾರ : ಇಬ್ಬರು ವ್ಯಕ್ತಿಗಳ ನಡುವೆ ಕುಡಿದ ಮತ್ತಿನಲ್ಲಿ ಶುರುವಾದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ನಡೆದಿದೆ. ಹೈದರಿ ನಗರದ ನಿವಾಸಿ ಮದೀನ್(28) ಮೃತ ದುರ್ಧೈವಿಯಾಗಿದ್ದು,
ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರ ಗಂಗಾ ಭೈರವೇಶ್ವರ ಬಾರ್ ನಲ್ಲಿ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆ ನಡೆದಿದ್ದು,
ವ್ಯಕ್ತಿಯನ್ನು ಕಬ್ಬಿಣದ ಕಂಬಿಯಿಂದ ಚುಚ್ಚಿ ಹತ್ಯೆ ಮಾಡಿ ಸ್ನೇಹಿತ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಮುಳಬಾಗಿಲು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.



