ನಟ ಅರ್ಜುನ್ ಕಪೂರ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಬಳಿಕ ನಟ ಮಲೈಕಾ ಅರೋರಾಗೆ ಮತ್ತೊಬ್ಬ ಬಾಯ್ ಫ್ರೆಂಡ್ ಸಿಕ್ಕಿದ್ದಾನೆ. 50 ವಯಸ್ಸು ದಾಟಿದ್ದರು ಮಲೈಕಾ ಹೆಸರು ಪದೇ ಪದೇ ಒಬ್ಬೊಬ್ಬರ ಜೊತೆ ಕೇಳಿ ಬರುತ್ತಿರುತ್ತದೆ. ಇದೀಗ ಮಲೈಕಾ ಹೆಸರು ಮಾಜಿ ಶ್ರೀಲಂಕಾ ಕ್ರಿಕೆಟರ್ ಕುಮಾರ ಸಂಗಕ್ಕರ್ ಜೊತೆ ತಳುಕು ಹಾಕಿಕೊಂಡಿದ್ದು ಇಬ್ಬರು ಒಟ್ಟಿಗಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾರ್ಚ್ 30ರಂದು ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವು ಗುವಾಹಟಿಯ ಸ್ಟೇಡಿಯಂನಲ್ಲಿ ನಡೆದಿದೆ. ಸಾಮಾನ್ಯವಾಗಿ ಮುಂಬೈನಲ್ಲಿ ಪಂದ್ಯ ಆದಾಗ ಬಾಲಿವುಡ್ ಸೆಲೆಬ್ರಿಟಿಗಳು ಹಾಜರಿ ಹಾಕುವುದು ಸಾಮಾನ್ಯ. ಆದರೆ, ಗುವಾಹಟಿಗೆ ಮಲೈಕಾ ಅವರು ಆಗಮಿಸಿದ್ದು ಏಕೆ ಎನ್ನುವ ಪ್ರಶ್ನೆಯು ಅನೇಕರಲ್ಲಿ ಮೂಡಿದೆ. ಜೊತೆಗೆ ಕುಮಾರ್ ಸಂಗಕರ್ ಜೊತೆ ಮಲೈಕಾ ಕೂತು ಕ್ರಿಕೆಟ್ ವೀಕ್ಷಿಸುತ್ತಿರುವ ಫೋಟೋ ವೈರಲ್ ಆಗಿದ್ದು ಇಬ್ಬರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ನಡೆಯುತ್ತಿದೆ ಎಂದು ಪ್ರತಿಯೊಬ್ಬರು ಊಹಿಸುತ್ತಿದ್ದಾರೆ.
ಕುಮಾರ್ ಸಂಗಕ್ಕರ್ ಅವರು ರಾಜಸ್ಥಾನ್ ರಾಯಲ್ಸ್ನ ಮಾಜಿ ಕೋಚ್. ಹೀಗಾಗಿ, ಅವರು ಆರ್ಆರ್ ತಂಡವನ್ನು ಬೆಂಬಲಿಸಿದ್ದಾರೆ. ಮಲೈಕಾ ಕೂಡ ರಾಜಸ್ಥಾನವನ್ನು ಬೆಂಬಲಿಸಿದ್ದರು.
ಮಲೈಕಾ ಅರೋರಾ ಹಾಗೂ ನಟ ಅರ್ಜುನ್ ಕಪೂರ್ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಇಬ್ಬರ ನಡುವಿನ ವಯಸ್ಸಿನ ಅಂತರ ಸಾಕಷ್ಟು ಟ್ರೋಲ್ ಗೆ ಗುರಿಯಾಗಿತ್ತು. ಆದರೂ ಇಬ್ಬರು ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಅರ್ಜುನ್ ಕಪೂರ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಮಲೈಕ ಇದೀಗ ಮತ್ತೊರ್ವ ಬಾಯ್ ಫ್ರೆಂಡ್ ಜೊತೆ ಡೇಟಿಂಗ್ ಶುರು ಮಾಡಿಕೊಂಡಿದ್ದಾರೆ.