ಭಾನುವಾರ ನಡೆದ IPL ಪಂದ್ಯದಲ್ಲಿ ರಾಜಸ್ಥಾನ್ ಹಾಗೂ CSK ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಧೋನಿ ಔಟಾದ ಪರಿ ನೋಡಿ CSK ಮಹಿಳಾ ಅಭಿಮಾನಿ ಓರ್ವರು ಬೈದಿರುವ ವಿಡಿಯೋ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಸಿಎಸ್ಕೆ ಬ್ಯಾಟಿಂಗ್ ಇನ್ನಿಂಗ್ಸ್ನ ಕೊನೆಯ ಓವರ್ ಭಾರೀ ರೋಚಕತೆಗೆ ತಿರುಗಿತ್ತು. ಸಿಎಸ್ಕೆ ಗೆಲ್ಲಲು ಕೊನೆಯ ಆರು ಬಾಲ್ನಲ್ಲಿ 20 ರನ್ಗಳ ಅಗತ್ಯ ಇತ್ತು. ಕ್ರೀಸ್ನಲ್ಲಿ ಧೋನಿ ಹಾಗೂ ಜಡೇಜಾ ಇದ್ದರು. 20ನೇ ಓವರ್ನ ಮೊದಲ ಬಾಲ್ ಮಾಡಲು ಸಂದೀಪ್ ಶರ್ಮಾ ಬಂದಿದ್ದರು. ಮೊದಲ ಬಾಲ್ ವೈಡ್ ಹಾಕಿದರು. ನಂತರ ಎಸೆದ ಬಾಲ್ ಅನ್ನು ಧೋನಿ ಸಿಕ್ಸ್ ಹೊಡೆಯಲು ಪ್ರಯತ್ನಿಸಿ ಸಿಮ್ರಾನ್ ಹಿಟ್ಮೇಯರ್ಗೆ ಕ್ಯಾಚ್ ನೀಡಿದರು.
ಧೋನಿ ಔಟ್ ಆಗ್ತಿದ್ದಂತೆಯೇ, ಸಿಎಸ್ಕೆ ಅಭಿಮಾನಿ ಒಬ್ಬಳು ಪ್ರೇಕ್ಷಕ ಗ್ಯಾಲರಿಯಲ್ಲಿ ತನ್ನ ಕೋಪವನ್ನು ಹೊರ ಹಾಕಿದ್ದಾಳೆ. ಧೋನಿ ಸಿಕ್ಸರ್ ಬಾರಿಸುತ್ತಾರೆ ಅಂದುಕೊಂಡಿದ್ದ ಯುವತಿ, ಹಿಟ್ಮೇಯರ್ ಕ್ಯಾಚ್ ಹಿಡಿಯುತ್ತಿದ್ದಂತೆಯೇ ಬೇಸರಗೊಂಡಿದ್ದಾಳೆ. ಕ್ಯಾಚ್ ಹಿಡಿದ ಹಿಟ್ಮೇಯರ್ನತ್ತ ತನ್ನ ಕೈತೋರಿಸಿದ್ದಾಳೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಯುವತಿಯ ವಿಡಿಯೋ ಮಿಮ್ಸ್ ಎಲ್ಲೆಡೆ ಹರಿದಾಡುತ್ತಿದೆ.
ಅಲ್ಲದೇ ವೀಕ್ಷಕರು ಸ್ವಲ್ಪ ಗೊಂದಲದಲ್ಲಿದ್ದಾರೆ. ಆಕೆ ಔಟ್ ಆದ ಧೋನಿ ಮೇಲೆ ಕೋಪ ತೋರಿಸಿದಳೋ, ಕ್ಯಾಚ್ ಹಿಡಿದ ಹಿಟ್ಮೇಯರ್ ಮೇಲೋ ಅಥವಾ ಬಾಲ್ ಮಾಡಿದ ಸಂದೀಪ್ ಶರ್ಮಾ ಮೇಲೋ ಎಂದು ಕೇಳ್ತಿದ್ದಾರೆ. ಒಟ್ಟಾರೆ ಈ ವಿಡಿಯೋ ನೋಡಿದವರು ಧೋನಿ ಬಾಲ್ ಕ್ಯಾಚ್ ಕೊಟ್ಟಿದ್ದಕ್ಕೆ ಮಹಿಳೆ ಕೋಪ ತಾಳಲಾರದೇ ಹಾಗೆ ಮಾಡಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.