LPG Price: ತಿಂಗಳ ಆರಂಭದಲ್ಲೇ ಭರ್ಜರಿ ಸಿಹಿಸುದ್ದಿ: ಎಲ್‌ಪಿಜಿ ದರ ಭಾರಿ ಇಳಿಕೆ

0
Spread the love

ನವದೆಹಲಿ: ಏಪ್ರಿಲ್ 1 ರಂದು ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್​ ಬೆಲೆಯನ್ನು ಇಳಿಕೆ ಮಾಡಿ ಗ್ರಾಹಕರಿಗೆ ಗುಡ್‌ ನ್ಯೂಸ್‌ ನೀಡಿದೆ. ತಕ್ಷಣದಿಂದ ಜಾರಿಗೆ ಬರುವಂತೆ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 41 ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಪರಿಷ್ಕೃತ ಚಿಲ್ಲರೆ ಮಾರಾಟ ಬೆಲೆ ಈಗ ಪ್ರತಿ ಸಿಲಿಂಡರ್‌ಗೆ 1,762 ರೂ.ಗಳಷ್ಟಿದೆ. ಈ ಕಡಿತದ ಮೊದಲು, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆ 1803 ರೂ.ಗಳಷ್ಟಿತ್ತು.

Advertisement

ಮುಂಬೈ: 1,714.50 ರೂ. ( 1,755.50 ರೂ. ರಿಂದ ಇಳಿಕೆ) ಕೋಲ್ಕತ್ತಾ: 1,872 ರೂ. (1,913 ರೂ.ಗಳಿಂದ ಇಳಿಕೆ) ಚೆನ್ನೈ: 1,924.50 ರೂ. ( 1,965.50 ರೂ. ರಿಂದ ಇಳಿಕೆ)

ಮನೆಗಳಲ್ಲಿ ಬಳಸುವ 14.2 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 14.2 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 803 ರೂ., ಕೋಲ್ಕತ್ತಾದಲ್ಲಿ 829 ರೂ., ಮುಂಬೈನಲ್ಲಿ 802.50 ರೂ. ಮತ್ತು ಚೆನ್ನೈನಲ್ಲಿ 818.50 ರೂ. ಇದೆ.

ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ 1 ನೇ ತಾರೀಖಿನಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸುತ್ತವೆ . ಅಗತ್ಯಕ್ಕೆ ಅನುಗುಣವಾಗಿ ಕಂಪನಿಗಳು ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸುತ್ತವೆ ಅಥವಾ ಕಡಿಮೆ ಮಾಡುತ್ತವೆ. ಕಂಪನಿಗಳು ಕೊನೆಯದಾಗಿ ಮಾರ್ಚ್ 1 ರಿಂದ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 6 ರೂ. ಹೆಚ್ಚಿಸಿದ್ದವು.


Spread the love

LEAVE A REPLY

Please enter your comment!
Please enter your name here