ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದ ಎರಡನೇ ಹಾಡು ಮೊನ್ನೆಯಷ್ಟೆ ಬಿಡುಗಡೆಯಾಗಿದೆ. ಈ ಸಾಂಗ್ ಸಖತ್ ಕ್ರೇಜಿ ಆಗಿ ಮೂಡಿ ಬಂದಿದೆ. ಇದು ಫ್ಯಾನ್ಸ್ ಸಖತ್ ಇಷ್ಟ ಆಗಿದೆ. ಪ್ರೇಮ್ ನಿರ್ದೇಶನದ ಈ ಚಿತ್ರದಲ್ಲಿ ಧ್ರುವ ಸರ್ಜಾ,
ರೀಷ್ಮಾ ಜೊತೆ ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ ರವಿಚಂದ್ರನ್, ರಮೇಶ್ ಅರವಿಂದ್, ನೋರಾ ಫತೇಹಿ ನಟಿಸಿದ್ದಾರೆ. ಇನ್ನೂ ಧ್ರುವ ಸರ್ಜಾ ‘ಕೆಡಿ’ ಸಿನಿಮಾ ಬ್ಯೂಸಿ ನಡುವೆಯೇ ಮಹತ್ವದ ಕಾರ್ಯವೊಂದನ್ನು ಮಾಡಿದ್ದಾರೆ.
ಹೌದು ಕಣ್ಣಿನಲ್ಲಿ ಪೊರೆ ಬೆಳೆದ ಪುಟ್ಟ ಕಂದಮ್ಮನ ಟ್ರೀಟ್‌ಮೆಂಟ್‌ಗೆ ನಟ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಪುಟ್ಟ ಮಗು ಚಿರಂಜೀವಿಗೆ ಎರಡು ಕಣ್ಣಿನಲ್ಲೂ ಪೊರೆ ಬೆಳೆದ ಹಿನ್ನೆಲೆ ಟ್ರೀಟ್‌ಮೆಂಟ್‌ಗಾಗಿ ಧ್ರುವ ಸಹಕರಿಸಿದ್ದಾರೆ.
ಮಂಜುನಾಥ ನೇತ್ರಾಲಯದ ವೈದ್ಯರ ಬಳಿ ಮಾತನಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಹಾಗಾಗಿ ಪುಟ್ಟ ಮಗುವಿಗೆ ಯಶಸ್ವಿಗಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಮೂಲಕ ಗಾರೆ ಕೆಲಸ ಮಾಡುವ ತಂದೆಯ ಬೆನ್ನಿಗೆ ನಿಂತಿದ್ದಾರೆ.
ಬಾಲಕನ ತಂದೆ ವಿಡಿಯೋನಲ್ಲಿ ಈ ಬಗ್ಗೆ ವಿವರಣೆ ನೀಡಿದ್ದು, ‘ನನ್ನ ಪುಟ್ಟ ಮಗನಿಗೆ ಕಣ್ಣಿನ ಸಮಸ್ಯೆ ಇತ್ತು. ಅದನ್ನು ಧ್ರುವ ಸರ್ಜಾ ಅಣ್ಣನ ಬಳಿ ಹೇಳಿಕೊಂಡೆವು. ಕೂಡಲೇ ಅವರು ಆಸ್ಪತ್ರೆಗೆ ಹೇಳಿದರು. ಅವರಿಂದ ಮಗನ ಕಣ್ಣು ದೃಷ್ಟಿ ಸರಿಹೋಗಿದೆ. ಅವನು ಪ್ರಪಂಚ ನೋಡುವಂತಾಗಿದೆ’ ಎಂದಿದ್ದಾರೆ.