ಚಿತ್ರದುರ್ಗ: ಗುಟ್ಕಾ ಖರೀದಿ ವಿಚಾರಕ್ಕೆ ಯುವಕನ ಕೊಲೆ ಮಾಡಿರುವ ಘಟನೆ ಹೊಸದುರ್ಗ ತಾಲ್ಲೂಕಿನ ಮತ್ತೋಡು ಗ್ರಾಮದಲ್ಲಿ ನಡೆದಿದೆ. ಸೋಮಶೇಖರ್ (25) ಮೃತಪಟ್ಟ ವ್ಯಕ್ತಿಯಾಗಿದ್ದು, ಮೃತ ಸೋಮಶೇಖರ್ ನ ತಮ್ಮ ನಾಗರಾಜ್ ಗುಟ್ಕಾ ತರಲು ಹೋದಾಗ, ನಾಗರಾಜ್ ಗೆ ಅಂಗಡಿ ಮಾಲೀಕ ಫೋನ್ ಪೇ ಇಲ್ಲ ಹಣ ಕೊಡುವಂತೆ ಸೂಚನೆ ನೀಡಿದ್ದಾರೆ.
ಈ ವೇಳೆ ಫೋನ್ ಪೇನಲ್ಲಿ ಹಣ ಇಲ್ಲ ಎಂದಿದ್ದು, ಈ ವೇಳೆ ಅಂಗಡಿಯಲ್ಲಿದ್ದ ರಘು ಎಂಬಾತನಿಂದ ನಾಗರಾಜ್ ಮೇಲೆ ಹಲ್ಲೆ ಮಾಡಲಾಗಿದೆ. ಈ ವೇಳೆ ಜಗಳ ಬಿಡಿಸಲು ನಾಗರಾಜ್ ನ ಅಣ್ಣ ಸೋಮಶೇಖರ್ ಬಂದಿದ್ದಾರೆ. ಈ ವೇಳೆ ರಘು, ಮಂಜುನಾಥ್, ಗವಿ ರಂಗನಾಥ್ ಹಾಗೂ ಶಶಿಕುಮಾರ್ ರಿಂದ ಸೋಮಶೇಖರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ನಂತರ ಗಂಭೀರವಾಗಿ ಗಾಯಗೊಂಡ ಸೋಮಶೇಖರ್ʼನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಸೋಮಶೇಖರ್ ಸಾವನ್ನಪ್ಪಿದ್ದಾನೆ. ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.