ತುಮಕೂರು: ಎರಡು ಗುಂಪುಗಳ ನಡುವೆ ನಡೆದ ಜಗಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಯುವಕರ ಗುಂಪೊಂದು ಹಳೆ ದ್ವೇಷಕ್ಕೆ ಪರಸ್ಪರ ಜಗಳ ಮಾಡಿಕೊಂಡು ಹಲ್ಲೆ ಮಾಡಿಕೊಂಡಿದ್ದರು.
ತುಮಕೂರು ಜಿಲ್ಲೆಯ ಮಧುಗಿರಿಯ ಬೆಂಕಿಪುರ ಹಾಗೂ ಸಿದ್ದಾಪುರ ಕಾಲೋನಿ ಹುಡುಗರ ಮಧ್ಯೆ ಗಲಾಟೆ ಆಗಿತ್ತು. ಹಣಕಾಸಿನ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದರು. ಸಿದ್ದಾಪುರದ ಮಂಜುನಾಥ್ ಹಾಗೂ ಬೆಂಕಿಪುರದ ಮಾರುತಿ ಎಂಬುವವರ ನಡುವೆ ಕಳೆದ ಎರಡು ತಿಂಗಳ ಹಿಂದೆ ಜಗಳ ನಡೆದಿತ್ತು..
ಹಳೆ ದ್ವೇಷದಿಂದ ಬೆಂಕಿಪುರದ ಮಾರುತಿ,ಆದಿ,ಶಿವ,ಪುನೀತ್ ,ಸೀನು,ಮಂಜು,ಮೇಸ್ತ್ರಿ ಸೂರಿ ಒಟ್ಟು 7 ಜನರ ಗುಂಪು ಕೊಲೆ ಪ್ರಯತ್ನ ಮಾಡಿದ್ದಾರೆಂದು ಆರೋಪಿಸಿದ್ದ ಗಾಯಾಳು ಮಂಜುನಾಥ್ ದೂರು ನೀಡಿದ್ದರು. ಈ ಸಂಬಂಧ ಒಟ್ಟು 7 ಜನರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿತ್ತು. ಈಗಾಗಲೇ ಐವರನ್ನು ಬಂಧಿಸಲಾಗಿದ್ದು,ಇನ್ನಿಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.