ಬೆಂಗಳೂರು:- ಇಂದು ಬೆಂಗಳೂರಿನಲ್ಲಿ ಮಳೆ ಅಬ್ಬರಿಸುತ್ತಿದ್ದು, ಹಲವೆಡೆ ಸಂಚಾರಕ್ಕೆ ಅಡ್ಡಿಯಾಗಿ ಸವಾರರು ಪರದಾಟ ನಡೆಸಿದ್ದಾರೆ. ಇನ್ನೂ ರಾಜಾಜಿನಗರದಲ್ಲಿ ಗಾಳಿ-ಮಳೆಗೆ ಬೃಹತ್ ಗಾತ್ರದ ಮರವೊಂದು ಧರೆಗುರಳಿದ ಪರಿಣಾಮ ಎರಡು ಕಾರುಗಳು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Advertisement
ಸ್ಕಾರ್ಫಿಯೋ ಮತ್ತು ಸ್ವಿಫ್ಟ್ ಕಾರಿನ ಮೇಲೆ ಮರು ಬಿದ್ದು, ದುಬಾರಿ ಕಾರುಗಳು ಹಾನಿಯಾಗಿದೆ. ಇಂದು ಮಧ್ಯಾಹ್ನ ಬಿದ್ದ ಭಾರೀ ಮಳೆಗೆ ಈ ದುರಂತ ಸಂಭವಿಸಿದೆ. ಕಾರಿನ ಜೊತೆಗೆ ಬೈಕ್ ಗಳು ಜಖಂ ಆಗಿರುವ ಮಾಹಿತಿ ಲಭ್ಯವಾಗಿದೆ. ಸದ್ಯ ಮರ ಬಿದ್ದು ರಸ್ತೆ ಬ್ಲಾಕ್ ಆಗಿದ್ದು, ಸ್ಥಳಕ್ಕೆ ಬಿಬಿಎಂಪಿ ಹಾಗೂ ಕೆ.ಇ.ಬಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.