ವಿಜಯನಗರ:- ನಗರದಲ್ಲಿ ಸುರಿದ ಭಾರೀ ಗಾಳಿ-ಮಳೆಗೆ ಅವಾಂತರ ಒಂದು ಸಂಭವಿಸಿದೆ. ವಿಜಯನಗರದ ಹೊಸಪೇಟೆಯ ಹೊಸೂರು ಮಾಗಾಣಿಯಲ್ಲಿ ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆ ನೆಲಕಚ್ಚಿರುವ ಘಟನೆ ಜರುಗಿದೆ. ಘಟನೆಯಿಂದ ರೈತರು ಕಂಗಾಲಾಗಿದ್ದಾರೆ.
ಒಂದೇ ತಿಂಗಳಿನಲ್ಲಿ ಕೈಗೆ ಬರುತ್ತಿದ್ದ ಬಾಳೆಗೊನೆಗಳು ನೆಲಕ್ಕುರುಳಿವೆ. ಒಂದು ಕೆಜಿಗೆ 18-20 ರೂ. ಬಾಳೆ ಮಾರಾಟ ಮಾಡುತ್ತಿದ್ದ ರೈತರಿಗೆ ಈಗ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ.
ಕಳೆದ ಬಾರಿಯೂ ಇದೇ ರೀತಿ ಬಾಳೆ ತೋಟ ನೆಲಕ್ಕೆ ಉರುಳಿ ಬಿದ್ದಿತ್ತು. ನೆಲಕ್ಕೆ ಉರುಳಿದ ಬಾಳೆ ಗೊನೆಗಳು ಸಂಪೂರ್ಣ ಕಟಾವಿಗೆ ಬಂದಿದ್ದವು. ಪ್ರತಿಬಾರಿ ಹೀಗೆ ಆದರೆ ನಮ್ಮ ಜೀವನ ಹೇಗೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.



