ಸಮಾಜದ ಉತ್ತಮ ಪ್ರಜೆಗಳಾಗಿ ಬಾಳಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಒಡೆಯರ ಮಲ್ಲಾಪುರ ಮೊರಾರ್ಜಿ ವಸತಿ ಶಾಲೆಯ ಎಸ್‌ಎಸ್‌ಎಲ್‌ಸಿಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲೆಯ ಚಿತ್ರಕಲಾ ಶಿಕ್ಷಕ ಪ್ರವೀಣ ಗಾಯಕರ ಭಾವಚಿತ್ರಗಳ (ಪೋಟ್ರೇಟ್ ಫೋಟೋ) ವಿಶೇಷ ಕೊಡುಗೆ ನೀಡಿ ಬೀಳ್ಕೊಟ್ಟರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಬಂಧ ಅತ್ಯಂತ ಶ್ರೇಷ್ಠ ಮತ್ತು ಸದಾ ಸ್ಮರಣೀಯವಾಗಿರುತ್ತದೆ. ಎಸ್‌ಎಸ್‌ಎಲ್‌ಸಿ ನಂತರ ಪಿಯುಸಿ, ಉನ್ನತ ಹಂತದ ಶಿಕ್ಷಣಕ್ಕೆ ಹೋಗುವ ವಿದ್ಯಾರ್ಥಿಗಳಾದ ನೀವು ಕಲಿಸಿದ ಗುರುಗಳು, ಶಾಲೆ, ತಂದೆ-ತಾಯಿಗಳ ಕೀರ್ತಿ ಹೆಚ್ಚಿಸುವ ಮೂಲಕ ಸಮಾಜದ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದರು.

ಪ್ರಾಚಾರ್ಯರಾದ ಡಿ.ಸಿ. ನರೇಗಲ್, ಹಿರಿಯ ಶಿಕ್ಷಕಿ ಎಂ.ಆಯ್. ಡಂಬಳ, ಶಿಕ್ಷಕರಾದ ಎಸ್.ಕೆ. ನದಾಫ್, ಅರ್ಜುನ ವಠಾರ, ವಿ.ಹೆಚ್. ರಾಠೋಡ, ಎಫ್.ಸಿ. ಹಮಸಾಗರ, ಎಸ್.ಎನ್. ತಳ್ಳಳ್ಳಿ, ಎಸ್.ಎ. ಬೆಟಗೇರಿ, ಸಿ.ಎಸ್. ನಾವಿ, ಸುಮಾ ಸಂಶಿ, ಲಕ್ಷ್ಮೀ ಡೊಳ್ಳಿನ ಸೇರಿ ಸಿಬ್ಬಂದಿಗಳಿದ್ದರು.


Spread the love

LEAVE A REPLY

Please enter your comment!
Please enter your name here