ಹುಬ್ಬಳ್ಳಿ ದೇವಾಲಯಕ್ಕೆ ಭೇಟಿ ನೀಡಿದ ಬಾಲಿವುಡ್ ನಟಿ ಸಾರಾ ಅಲಿ ಖಾನ್

0
Spread the love

ಇತ್ತೀಚೆಗೆ ಬಾಲಿವುಡ್‌ ನ ಹಲವು ನಟಿಯರು ಕರ್ನಾಟಕದ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವುದು ಸಾಮಾನ್ಯವಾಗಿದೆ. ಇದೀಗ ಹಿಂದಿ ಚಿತ್ರರಂಗದ ಖ್ಯಾತ ನಟಿ ಸಾರಾ ಅಲಿ ಖಾನ್‌ ಹುಬ್ಬಳ್ಳಿಯ ಪ್ರಮುಖ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

Advertisement

ಬಾಲಿವುಡ್ನ ಸ್ಟಾರ್ ಯುವನಟಿ ಸಾರಾ ಅಲಿಖಾನ್ ಹುಬ್ಬಳ್ಳಿಯ ಉಣಕಲ್‌ನ ಚಂದ್ರ ಮೌಳೀಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಸೆಲ್ವಾರ್ ಕಮೀಜ್ ತೊಟ್ಟು ದೇವಾಲಯಕ್ಕೆ ಬಂದಿದ್ದ ಸಾರಾ ಅಲಿ ಖಾನ್, ದೇವಾಲಯದ ಆವರಣದಲ್ಲಿ ಕೆಲ ಚಿತ್ರಗಳನ್ನು ತೆಗೆಸಿಕೊಂಡಿದ್ದು, ಅವುಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಚಂದ್ರಮೌಳೇಶ್ವರ ದೇವಾಲಯ, ಉಣಕಲ್ ಎಂದು ಲೊಕೇಶನ್ ಪಿನ್ ಮಾಡಿದ್ದಾರೆ.

ನಟಿ ಸಾರಾ ಅಲಿ ಖಾನ್ ತಂದೆ ಸೈಫ್ ಅಲಿ ಖಾನ್ ಕೆಲ ವಾರಗಳ ಹಿಂದಷ್ಟೆ ಅಗಂತುಕನೊಬ್ಬನಿಂದ ಚಾಕು ಇರಿತಕ್ಕೆ ಒಳಗಾಗಿದ್ದರು. ಆ ವೇಳೆ ತಂದೆಯನ್ನು ಆದಷ್ಟು ಬೇಗ ಗುಣಪಡಿಸುವಂತೆ ಸಾರಾ ಹರಕೆ ಹೊತ್ತಿದ್ದರಂತೆ. ಅಂತೆಯೇ ಸೈಫ್‌ ಅಲಿ ಖಾನ್‌ ಚೇತರಿಸಿಕೊಂಡಿದ್ದು ಇದೀಗ ಹರಕೆ ತೀರಿಸಲು ಸಾರಾ ಅಲಿ ಖಾನ್ ಚಂದ್ರಮೌಳೇಶ್ವರ ದೇವಾಲಯಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ.

ಹುಬ್ಬಳ್ಳಿಯ ಚಂದ್ರಮೌಳೀಶ್ವರ ದೇವಾಲಯ ಸುಮಾರು 900 ವರ್ಷಗಳಷ್ಟು ಪುರಾತನ ದೇವಾಲಯ ಎನ್ನಲಾಗುತ್ತದೆ. ಇದು ಬಾದಾಮಿ, ಚಾಲುಕ್ಯರ ಕಾಲದ ದೇವಾಲಯವಾಗಿದೆ. ಈ ದೇವಾಲಯದ ಚತುರ್ಮುಖ ಲಿಂಗ ಪ್ರಸಿದ್ಧವಾಗಿದೆ. ದೇವಾಲಯದ ಸುತ್ತಲೂ ಸುಂದರವಾದ ಕೆತ್ತನೆಗಳಿವೆ. ಇದು ರಾಷ್ಟ್ರೀಯ ಪ್ರಾಮುಖ್ಯ ಹೊಂದಿರುವ ದೇವಾಲಯ ಆಗಿದೆ.


Spread the love

LEAVE A REPLY

Please enter your comment!
Please enter your name here