ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾಗಳಿಂದ ಬ್ರೇಕ್ ಪಡೆದುಕೊಂಡು ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿಯಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಂಡಿರುವ ಪವನ್ ಕಲ್ಯಾಣ್ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಅವರು ಸಿನಿಮಾಗಳಿಂದ ದೂರ ಉಳಿಯುವಂತಾಗಿದೆ. ಇದೀಗ ಪವನ್ ಕಲ್ಯಾಣ್ ಅಭಿಮಾನಿಯೋರ್ವ ರಕ್ತದಲ್ಲಿ ಪವನ್ ಕಲ್ಯಾಣ್ ಚಿತ್ರ ಬಿಡಿಸಿ ಅಭಿಮಾನ ಮೆರೆದಿದ್ದಾನೆ.
ಪಶ್ಚಿಮ ಗೋದಾವರಿ ಜಿಲ್ಲೆಯ ತನುಕು ಮಂಡಲದ ದುವ್ವಾ ಗ್ರಾಮದ ಇಂಟರ್ ಸ್ಕೂಲ್ ವಿದ್ಯಾರ್ಥಿ ವೆಂಕಟ ಹರಿಚರಣ್ ರಕ್ತದಲ್ಲಿ ಪವನ್ ಕಲ್ಯಾಣ್ ಚಿತ್ರಬಿಡಿಸಿದ್ದಾರೆ. ವೆಂಕಟ್ ಹರಿಚರಣ್ ಬಾಲ್ಯದಿಂದಲೂ ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿ. ಪವನ್ ಕಲ್ಯಾಣ್ ತಮ್ಮ ಏರಿಯಾಗೆ ಬರುತಿದ್ದಾರೆ ಎಂದು ತಿಳಿದು ಅವರನ್ನು ನೋಡಬೇಕು. ಅವರಿಗೆ ಏನಾದರು ನೀಡಬೇಕು ಎಂದು ತಮ್ಮ ರಕ್ತದಿಂದ ಪವನ್ ಕಲ್ಯಾಣ್ ಅವರ ಚಿತ್ರವನ್ನು ಬಿಡಿಸಿದ್ದಾರೆ.
ಶುಕ್ರವಾರ (ಏಪ್ರಿಲ್ 4) ರಾಜಮಂಡ್ರಿ ಜೈಲು ರಸ್ತೆಯಲ್ಲಿ ನಡೆದ ಅಮರಾವತಿ ಆರ್ಟ್ ಸ್ಟ್ರೀಟ್ ಕಾರ್ಯಕ್ರಮದಲ್ಲಿ ಪವನ್ ಭಾಗವಹಿಸುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಪವನ್ ಪ್ರವಾಸ ರದ್ದಾಯಿತು. ಇದು ಹರಿಚರಣ್ ಅವರನ್ನು ನಿರುತ್ಸಾಹಗೊಳಿಸಿತು. ಆದರೆ ಅವರು ರಕ್ತದಲ್ಲಿ ಬಿಡಿಸಿದ ಪವನ್ ಕಲ್ಯಾಣ್ ಅವರ ಫೋಟೋವನ್ನು ಸಚಿವ ಕಂದುಲ ದುರ್ಗೇಶ್, ಉಪಸಭಾಪತಿ ರಘುರಾಮ ಮತ್ತು ಶಾಸಕ ಆದಿರೆಡ್ಡಿ ಅವರಿಗೆ ನೀಡಿದ್ದಾರೆ.