ವಿಜಯಸಾಕ್ಷಿ ಸುದ್ದಿ, ಗದಗ: ಬಾಲ್ಯದಿಂದಲೂ ಸರಳ ಮತ್ತು ಸ್ನೇಹಮಯಿ ವ್ಯಕ್ತಿತ್ವ ಹೊಂದಿರುವ ಅನಿತಾ ಹದ್ದಣ್ಣವರ ಕೆಎಎಸ್ ಪರೀಕ್ಷೆ ಉತ್ತೀರ್ಣರಾಗಿ 2006ರಲ್ಲಿ ಡಿವೈಎಸ್‌ಪಿ ಹುದ್ದೆಯನ್ನು ಪಡೆದು, ಸದ್ಯ ಬೆಂಗಳೂರಿನ ಪಶ್ವಿಮ ವಿಭಾಗದ ಟ್ರಾಫಿಕ್ ಡಿಸಿಪಿ ಹುದ್ದೆಯಲ್ಲಿದ್ದಾರೆ.
Advertisement
ಅವರು ಪ್ರಸಕ್ತ ಸಾಲಿನ ಮುಖ್ಯಮಂತ್ರಿ ಪದಕವನ್ನು ಪಡೆದುಕೊಂಡಿದ್ದು, ಈ ಗೌರವಕ್ಕೆ ಭಾಜನರಾದ ಡಿಸಿಪಿ ಅನಿತಾ ಹದ್ದಣ್ಣವರವರನ್ನು ಅರವಿಂದ ಹುಲ್ಲೂರ, ಮಂಜುನಾಥ ಮ್ಯಾಗೇರಿ, ಗದಗ-ಬೆಟಗೇರಿ ಹೆಲ್ತ್ ಕ್ಯಾಂಪ್ ಯುವಕ ಸಂಘ, ಮಹಿಳಾ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ.


