ಚಿಕ್ಕಬಳ್ಳಾಪುರ:- ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಸೈಡ್ ಪಿಕಪ್ ಹೆಸರಿನಲ್ಲಿ ನಮ್ಮ ಯಾತ್ರಿ ಹಾಗೂ ರ‍್ಯಾಪಿಡ್ ಚಾಲಕರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಟ್ಯಾಕ್ಸಿಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಈ ಆರೋಪ ತಳ್ಳಿ ಹಾಕಿರುವ ಏರ್ಪೋರ್ಟ್‌ನ ಕೆಎಸ್‌ಟಿಡಿಸಿ ಚಾಲಕರು, ನಮಗೆ ಪೊಲೀಸರೇ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಯಾಣಿಕರನ್ನು ಪಿಕಪ್ ಮಾಡಲು ಬಂದಿದ್ದ 20ಕ್ಕೂ ಅಧಿಕ ಟ್ಯಾಕ್ಸಿಗಳನ್ನ ವಶಕ್ಕೆ ಪಡೆದು ಕಿರುಕುಳ ನೀಡುತ್ತಿದ್ದಾರೆ. ನಿನ್ನೆ ಸಂಜೆಯಿಂದ ಟ್ಯಾಕ್ಸಿಗಳನ್ನ ಬಿಡದೇ ಕುರುಕುಳ ಕೊಡುತ್ತಿದ್ದಾರೆ. ಹಬ್ಬದ ದಿನವೂ ಟ್ಯಾಕ್ಸಿ ಬಿಡದೇ ಸತಾಯಿಸುತ್ತಿದ್ದಾರೆ, ಅಂತ ಠಾಣೆ ಎದುರೇ ಬೀಡುಬಿಟ್ಟಿರುವ ಟ್ಯಾಕ್ಸಿ ಚಾಲಕರು ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ನಮಗೆ ನ್ಯಾಯ ಕೊಡಿಸಿ ಅಂತ ಪೊಲೀಸ್ ಠಾಣೆ ಮುಂದೆ ಟ್ಯಾಕ್ಸಿ ಚಾಲಕರು ಒತ್ತಾಯಿಸಿದ್ದಾರೆ.