ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಜಗದ್ಗುರು ತೋಂಟದಾರ್ಯ ಮಠದ 2025ನೇ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ಎಪ್ರಿಲ್ 5 ಹಾಗೂ 6ರಂದು ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾವಳಿಗಳು ಜರುಗಿದವು.
ಪುರುಷರ ವಿಭಾಗದಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದವು. ಅವುಗಳ ಪೈಕಿ ಮೆಣಸಗಿ ಗ್ರಾಮದ ಜಯಕರ್ನಾಟಕ ಕಬಡ್ಡಿ ತಂಡ ಪ್ರಥಮ ಸ್ಥಾನ ಗಳಿಸಿತು. ದ್ವಿತೀಯ ಸ್ಥಾನವನ್ನು ಶಿರೋಳದ ಮರಡಿ ಮಹಾಂತೇಶ ಕಬಡ್ಡಿ ತಂಡ, ತೃತೀಯ ಸ್ಥಾನವನ್ನು ಲಿಂಗಬಸವೇಶ್ವರ ಕಬಡ್ಡಿ ತಂಡ ಪಡೆದರೆ, 4ನೇ ಸ್ಥಾನವನ್ನು ಮುಂಡರಗಿಯ ಭಗತ್ ಸಿಂಗ್ ಕಬಡ್ಡಿ ತಂಡ ಗಳಿಸಿತು.
ಮಹಿಳಾ ವಿಭಾಗದಲ್ಲಿ ನಾಲ್ಕು ಕಬಡ್ಡಿ ತಂಡಗಳು ಭಾಗವಹಿಸಿದ್ದವು. ಅವುಗಳ ಪೈಕಿ ಗದಗ ಜಿಲ್ಲಾ ಕಬಡ್ಡಿ ತಂಡ ಪ್ರಥಮ, ಕಲಕೇರಿಯ ಶರಣಬಸವೇಶ್ವರ ಕಬಡ್ಡಿ ತಂಡ ದ್ವಿತೀಯ, ಮುಳಗುಂದ ಗ್ರಾಮದ ಮಹಿಳಾ ತಂಡ ತೃತೀಯ ಸ್ಥಾನವನ್ನು ಗಳಿಸಿದವು.
ವಿಜೇತ ಕಬಡ್ಡಿ ತಂಡಗಳಿಗೆ ಪ್ರಶಸ್ತಿ ಫಲಕ ಹಾಗೂ ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು. ಪೊಲೀಸ್ ಅಧಿಕಾರಿಗಳಾದ ಪಾಟೀಲ್, ಮುರುಘೇಶ ಬಡ್ನಿ, ಜಿ.ಬಿ. ಪಾಟೀಲ, ಅಮರೇಶ ಅಂಗಡಿ ಹಾಗೂ ಜಾತ್ರಾ ಮಹೋತ್ಸವ ಸಮಿತಿಯ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪಂದ್ಯಾವಳಿಗಳ ನಿರ್ಣಾಯಕರಾಗಿ ಎಸ್.ಆರ್. ಗಣಾಚಾರಿ, ಎಂ.ಬಿ. ತುಪ್ಪದ, ಬಿ.ಎಚ್. ಹಡಪದ, ಶರಣಪ್ಪ ಅಂಗಡಿ, ಎಸ್.ಎಫ್. ಗಡಾದ, ಪೂಜಾರ, ಎಸ್.ಬಿ. ಆಲೂರ, ಸನಗುಂಡಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಿದ್ಧಲಿಂಗೇಶ್ವರ ಕಬಡ್ಡಿ ತಂಡದ ಹಿರಿಯ ಆಟಗಾರರನ್ನು ಸನ್ಮಾನಿಸಲಾಯಿತು.