ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯ 2005-06ನೇ ಸಾಲಿನ ವಿದ್ಯಾರ್ಥಿಗಳಿಂದ ಅಕ್ಷರದ ಅರಿವು ನೀಡಿದ ಗುರುವೃಂದಕ್ಕೆ ಎಪ್ರಿಲ್ 10ರಂದು ಬೆಳಿಗ್ಗೆ 10.30 ಗಂಟೆಗೆ ಗುರುವಂದನೆ ಕಾರ್ಯಕ್ರಮವನ್ನು ಶಾಲೆಯ ಆವರಣದಲ್ಲಿರುವ ಬಸವರಾಜ ಹೊರಟ್ಟಿ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ನಮ್ಮ ಸನಾತನ ಧರ್ಮ-ಪರಂಪರೆಯಲ್ಲಿ ಗುರುಗಳಿಗೆ ಮಹತ್ವದ ಸ್ಥಾನವಿದೆ. ಅವರನ್ನು ದೇವರಿಗೆ ಸಮನಾಗಿ ಭಕ್ತಿ, ಗೌರವದಿಂದ ಕಾಣಲಾಗುತ್ತದೆ. ಬಾಳಿನಲ್ಲಿ ತಂದೆ-ತಾಯಿಗಿರುವಷ್ಟೇ ಗೌರವವನ್ನು ಗುರುಗಳಿಗೆ ನೀಡಲಾಗುತ್ತದೆ. ಗುರುಗಳು ಶ್ರೇಷ್ಠ ವ್ಯಕ್ತಿತ್ವಗಳ ನಿರ್ಮಾತೃಗಳಾಗಿದ್ದು, ಅವರುಗಳಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಸಭಾಪತಿಗಳಾದ ಬಸವರಾಜ ಹೊರಟ್ಟಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಾ.ಶಿ. ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವ್ಹಿ. ಶೆಟ್ಟೆಪ್ಪನವರ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಲೆಯ ದತ್ತು ಉಸ್ತುವಾರಿ ಡಾ. ಬಸವರಾಜ ಧಾರವಾಡ ಪಾಲ್ಗೊಳ್ಳಲಿದ್ದಾರೆ.
ಬಸವರಾಜ ಹೊರಟ್ಟಿ ದಂಪತಿಗಳು ಶಾಲೆಯನ್ನು ದತ್ತುಪಡೆದು ರಾಜ್ಯದಲ್ಲಿಯೇ ಒಂದು ಮಾದರಿ ಶಾಲೆಯನ್ನಾಗಿ ನಿರ್ಮಿಸುವ ಮೂಲಕ ಶಾಲೆಯ ಕಳೆಯನ್ನು ಹೆಚ್ಚಿಸಿದ್ದಾರೆ. ಆ ದಂಪತಿಗಳಿಗೂ ಹಳೆಯ ವಿದ್ಯಾರ್ಥಿಗಳಿಂದ ಕೃತಜ್ಞತೆಗಳನ್ನು ಸಲ್ಲಿಸುವ ಮೂಲಕ ಗೌರವಿಸಲಾಗುವುದು.
ಗುರುವೃಂದದವರಾದ ಗಂಗಾಧರ ಎಚ್.ಆರ್, ಎಸ್.ಬಿ. ಗೂಳಪ್ಪನವರ, ಎಸ್.ಆರ್. ಹೂಗಾರ, ಎಂ.ವೀರಪ್ಪ, ಎ.ಎಮ್. ಕುಂಟೋಜಿ, ಎಸ್.ಎಸ್. ಕಪ್ಪರದ, ಎಂ.ಪಿ. ಚಿಂಚೇವಾಡಿ, ವ್ಹಿ.ಎಮ್. ಬೂದಿಹಾಳ, ಜೆ.ಬಿ. ಅಣ್ಣಿಗೇರಿ, ವ್ಹಿ.ಬಿ. ತಾಳಿಕೋಟಿ, ಜೆ.ಎ. ಬಾವಿಕಟ್ಟಿ, ಎಸ್.ಆರ್. ಹನಮಗೌಡ್ರ, ಎಸ್.ಆರ್. ಯಲಿಗಾರ, ಗಾಯತ್ರಿ ವಸ್ತçದ, ಎಸ್. ಸುನಿತಾ, ಎಮ್.ಪಿ. ಸಾಂಬ್ರಾಣಿ, ಸಂಗೀತಾ ಪಾಟೀಲ, ಬಸಮ್ಮ ಹೂಗಾರ, ಎಂ.ಐ. ಶಿವನಗೌಡ್ರು, ಸುಮಂಗಲ ಎಂ.ಪತ್ತಾರ್, ಶಾರದಾ ಬಾಣದ, ಶೋಭಾ ಎಸ್.ಗಾಳಿ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಗಂಗಾ ಎಂ.ಅಳವAಡಿ, ಮಂಜುಳಾ ಟಿ, ಶಶಿಕಲಾ ಬಿ.ಗುಳೇದವರ, ಶಾರದಾ ಬಾಣದ, ಸಂಜೀವಿನಿ ಕೂಲಗುಡಿ, ಪದ್ಮಾ ವಿ.ದಾಸರ್, ಲಕ್ಷ್ಮಮ್ಮ ಮಾಳೋತ್ತರ್ ಇವರುಗಳಿಗೆ ಗುರುವಂದನೆ ಸಲ್ಲಿಸಲಾಗುವುದು ಎಂದು 2005-06ನೇ ಸಾಲಿನ ವಿದ್ಯಾರ್ಥಿಗಳು ತಿಳಿಸಿದ್ದಾರೆ.