ಟಿ.ಬಿ ಮಾನ್ವಿ ಕಾಲೇಜಿನ ಫಲಿತಾಂಶ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ:ಪಟ್ಟಣದ ಟಿ.ಬಿ ಮಾನ್ವಿ ಸರ್ಕಾರಿ ಪಿ.ಯು ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.93ರಷ್ಟಾಗಿದೆ.

Advertisement

ವಿಜ್ಞಾನ ವಿಭಾಗದಲ್ಲಿ ಲಕ್ಷ್ಮೀ ಜಿಗಳೂರ ಶೇ.96.66 ಅಂಕ ಗಳಿಸಿ ಜಿಲ್ಲೆಗೆ ತೃತೀಯ, ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಮಿಸ್ಬಾ ಕೌಸರ ಹುಲಗೇರಿ ಶೇ.95, ಅಕ್ಕಮ್ಮ ಓಂಕಾರಿ ಶೇ.93.5 ಅಂಕ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಹರೀಶ ನವಲಗುಂದ ಶೇ.86.5, ಮಲ್ಲವ್ವ ವರದಿ ಶೇ.85.5, ಮಂಜುನಾಥ ಈಳಗೇರ ಶೇ. 82.5 ಮತ್ತು ಕಲಾ ವಿಭಾಗದಲ್ಲಿ ಅರುಣಾ ಶಿರಹಟ್ಟಿ ಶೇ. 90, ಮಂಜುನಾಥ ಸಂಕಪ್ಪನವರ ಶೇ. 88.5, ಸುವರ್ಣ ಹಿರೇಮಠ ಶೇ. 87 ಅಂಕ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನಗೆ ಕಾಲೇಜು ಅಭಿವೃದ್ಧಿ ಸಮಿತಿ ಹರ್ಷ ವ್ಯಕ್ತಪಡಿಸಿದೆ.


Spread the love

LEAVE A REPLY

Please enter your comment!
Please enter your name here