ಪಿಯುಸಿಯಲ್ಲಿ ಸಾಧನೆ ಮಾಡಿದ ಪುನೀತ್ ರಾಜ್‌ ಕುಮಾರ್‌ ಬಾಡಿಗಾರ್ಡ್ ಮಗಳು: ಓದಿನ ಮೂಲಕ ಅಪ್ಪುಗೆ ಧನ್ಯವಾದ ಹೇಳಿದ ಅಮೂಲ್ಯ

0
Spread the love

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಬಾಡಿಗಾರ್ಡ್‌ ಆಗಿದ್ದ ಚಲಪತಿ ಮಗಳು ಅಮೂಲ್ಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಅಮೂಲ್ಯ ಅವರಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 94.33% ಅಂಕಗಳು ಬಂದಿದ್ದು ಸಹಜವಾಗಿಯೇ ಛಲಪತಿ ಅವರಿಗೆ ಖುಷಿಯಾಗಿದೆ. ಮಗಳ ಈ ಸಾಧನೆ ಯಜಮಾನ್ರ (ಅಪ್ಪು) ಆಶೀರ್ವಾದ ಎಂದಿದ್ದಾರೆ. ಮಾತ್ರವಲ್ಲದೆ ತಮ್ಮ ಮಗಳನ್ನು ಓದಿಸಿದ್ದು ಅಪ್ಪು ಅವರೇ ಎಂದು ಚಲಪತಿ ಹೇಳಿದ್ದಾರೆ.

Advertisement

ಛಲಪತಿ ಹಾಗೂ ಲಕ್ಷ್ಮೀ ದಂಪತಿಯ ಪುತ್ರಿ ಅಮೂಲ್ಯ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸ್‌ ಆಗಿದ್ದಾರೆ. ಹುಲ್ಲಹಳ್ಳಿ ಕ್ರೈಸ್ಟ್ ಅಕಾಡೆಮಿಯಲ್ಲಿ ಅಮೂಲ್ಯ ಕಾಮರ್ಸ್‌ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅಮೂಲ್ಯ ಕನ್ನಡ ಭಾಷೆಯಲ್ಲಿ 98 ಅಂಕ. ಎಕನಾಮಿಕ್ಸ್‌ನಲ್ಲಿ 97, ಇಂಗ್ಲೀಷ್ 90, ಬ್ಯುಸಿನೆಸ್ ಸ್ಟಡೀಸ್ 90, ಅಕೌಂಟೆನ್ಸಿಯಲ್ಲಿ 96 ಹಾಗೂ ಸ್ಟಾಟಿಸ್ಟಿಕ್ಸ್‌ನಲ್ಲಿ 95 ಅಂಕ ಸೇರಿ ಒಟ್ಟು 600 ಅಂಕಗಳಿಗೆ 566 ಅಂಕ ಗಳಿಸಿ ಗಮನ ಸೆಳೆದಿದ್ದಾರೆ. ಮುಂದೆ ಬಿ.ಕಾಂ ಓದಿ ಆ ಬಳಿಕ ಸಿಎ ಮಾಡುವ ಕನಸನ್ನು ಹೊಂದಿದ್ದಾರೆ.

ಮಾಧ್ಯಮದ ಜೊತೆ ಮಾತಾಡಿರುವ ಛಲಪತಿ, ‘ನನ್ನ ಮಗಳ ಸಾಧನೆಗೆ ಪುನೀತ್ ರಾಜ್​ಕುಮಾರ್ ಅವರ ಆಶೀರ್ವಾದವೂ ಕಾರಣ. ಮಗಳು ಪ್ರಾಥಮಿಕ ಶಾಲೆಯಲ್ಲಿ ಇದ್ದಾಗಿನಿಂದಲೂ ಅವರೇ ಓದಿಸುತ್ತಿದ್ದರು. ನನ್ನ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಅವರೇ ಹೊತ್ತಿದ್ದರು’ ಎಂದಿದ್ದಾರೆ. ಚಲಪತಿ ಪುತ್ರಿ ಅಮೂಲ್ಯ ಮಾತನಾಡಿ, ‘ನಮ್ಮನ್ನು ಓದಿಸಿದ್ದ ಪುನೀತ್ ಅವರು, ಅವರ ಸಹಾಯಕ್ಕೆ ಓದಿನ ಮೂಲಕ ಧನ್ಯವಾದ ಹೇಳಿದ್ದೇನೆ’ ಎಂದಿದ್ದಾರೆ.


Spread the love

LEAVE A REPLY

Please enter your comment!
Please enter your name here