ಬೆಂಗಳೂರು :- ಇದೇ ತಿಂಗಳ 17 ರಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಕುರಿತು ಚರ್ಚೆ ನಡೆಯಲಿದ್ದು, ಹಲವು ಸಮುದಾಯಗಳು ತಮ್ಮ ಮೀಸಲಾತಿಯನ್ನು ವ್ಯಕ್ತಪಡಿಸಿದರೆ, ಇನ್ನೂ ಹಲವು ಸಮುದಾಯಗಳು ಅದನ್ನು ವಿರೋಧಿಸಿದ್ದು, ಹೊಸದಾಗಿ ನಡೆಸುವಂತೆ ಕೋರಿವೆ.
ಇದರ ಮಧ್ಯೆಯೇ ಬಹು ನಿರೀಕ್ಷಿತ ಜಾತಿ ಗಣತಿ ವರದಿಯ ಅಂಕಿ-ಅಂಶ ಬಹಿರಂಗ ಆಗಿದೆ. ಈ ಸಮೀಕ್ಷೆಗೆ ಒಟ್ಟು 5 ಕೋಟಿ 98 ಲಕ್ಷ 14 ಸಾವಿರದ 942 ಜನರು ಒಳಪಟ್ಟಿದ್ದಾರೆ.
ಯಾವ ಜಾತಿ ಜನಸಂಖ್ಯೆ ಎಷ್ಟು?
ಜಾತಿಗಣತಿ: ಎಸ್ಸಿ:
ಜನಸಂಖ್ಯೆ – 1,09,29,347
ಮೀಸಲಾತಿ – 24.1%
ಶಿಫಾರಸು – 24.1%
ಜಾತಿಗಣತಿ: ಎಸ್ಟಿ:
ಜನಸಂಖ್ಯೆ – 42,81,289
ಮೀಸಲಾತಿ – 9.95%
ಶಿಫಾರಸು – 9.95%
ಜಾತಿಗಣತಿ: ಪ್ರವರ್ಗ 1ಎ:
ಜನಸಂಖ್ಯೆ – 34,96,638 (8.40%)
ಮೀಸಲಾತಿ – 4%
ಶಿಫಾರಸು – 6%
ಜಾತಿಗಣತಿ: ಪ್ರವರ್ಗ 1ಬಿ (ಹೊಸ ಸೃಷ್ಟಿ):
ಜನಸಂಖ್ಯೆ – 73,92,313 (17.74%)
ಮೀಸಲಾತಿ – –
ಶಿಫಾರಸು – 12
ಜಾತಿಗಣತಿ: ಪ್ರವರ್ಗ 2ಎ:
ಜನಸಂಖ್ಯೆ – 77,78,209 (18.70%)
ಮೀಸಲಾತಿ – 15%
ಶಿಫಾರಸು – 10%
ಜಾತಿಗಣತಿ: ಪ್ರವರ್ಗ 2ಬಿ (ಮುಸ್ಲಿಂ):
ಜನಸಂಖ್ಯೆ – 75,25,880 (18.08%)
ಮೀಸಲಾತಿ – 04%
ಶಿಫಾರಸು – 08%
ಜಾತಿಗಣತಿ: ಪ್ರವರ್ಗ 3ಎ (ಒಕ್ಕಲಿಗ):
ಜನಸಂಖ್ಯೆ – 72,99,577 (17.53%)
ಮೀಸಲಾತಿ – 04%
ಶಿಫಾರಸು – 07%
ಜಾತಿಗಣತಿ: ಪ್ರವರ್ಗ 3ಬಿ (ಲಿಂಗಾಯತ):
ಜನಸಂಖ್ಯೆ – 81,37,536 (19.55%)
ಮೀಸಲಾತಿ – 05%
ಶಿಫಾರಸು – 08%
ಜಾತಿಗಣತಿ: ಒಟ್ಟು ಮೀಸಲಾತಿ:
ಪ್ರಸ್ತುತ – 66%
ಶಿಫಾರಸು – 85.1% (+19.1%)
ಜಾತಿಗಣತಿ ಲೆಕ್ಕ:
ಓಬಿಸಿ ಜನಸಂಖ್ಯೆ – 4.18 ಕೋಟಿ
ಎಸ್ಸಿ ಜನಸಂಖ್ಯೆ – 1,09,29,347
ಎಸ್ಟಿ ಜನಸಂಖ್ಯೆ – 42,81,289
ಸಾಮಾನ್ಯ ವರ್ಗದ ಜನಸಂಖ್ಯೆ – 29,74,153
ಸರ್ವೇಗೆ ಒಳಪಟ್ಟ ಜನಸಂಖ್ಯೆ- 5,98,14,942.
ಇನ್ನೂ ದಶಕದ ಬಳಿಕ ರಾಜ್ಯ ಸರ್ಕಾರ, ಜಾತಿ ಜನಗಣತಿಗೆ ಮೆತ್ತಿದ್ದ ಧೂಳು ಜಾಡಿಸಿದೆ. ಕಳೆದ ವರ್ಷ ಕೈ ಸೇರಿದ್ರೂ ಈಗ ಮುಹೂರ್ತ ಕೂಡಿ ಬಂದಿದೆ. ನಿನ್ನೆ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2015 ಮಂಡನೆ ಆಗಿದೆ. ಸಮಗ್ರ ಚರ್ಚೆಗೆ ಮುಂದಿನ ಗುರುವಾರದ ಸಚಿವ ಸಂಪುಟ ಸಭೆಯ ಮುಹೂರ್ತ ನಿರ್ಣಯ ಆಗಿದೆ.