ಜೈಪುರ: ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದು, ಯಶಸ್ವಿ ಜೈಸ್ವಾಲ್ ಮಾತ್ರ ಅರ್ಧಶತಕ ಸಿಡಿಸಿ ತಂಡದ 173ರ ಸವಾಲಿನ ಮೊತ್ತ ದಾಖಲಿಸಲು ನೆರವಾದರು.
ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ಪವರ್ ಪ್ಲೇನಲ್ಲಿ 45 ರನ್ಗಳಿಸಿದರು. ಪವರ್ ಪ್ಲೇನಲ್ಲಿ ರನ್ಗಳಿಸಲು ಪರದಾಡಿದ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಕೃನಾಲ್ ಪಾಂಡ್ಯ ಬೌಲಿಂಗ್ನಲ್ಲಿ ಸ್ಟಂಪ್ ಆದರು. ಅವರು 19 ಎಸೆತಗಳಲ್ಲಿ 15 ರನ್ಗಳಿಸಿ ಔಟ್ ಆದರು. ಆದರೆ ಯಶಸ್ವಿ ಜೈಸ್ವಾಲ್ 47 ಎಸೆತಗಳಲ್ಲಿ 10 ಬೌಂಡರಿ , 2 ಸಿಕ್ಸರ್ ಸಹಿತ 75 ರನ್ಗಳಿಸಿ ತಂಡಕ್ಕೆ ನೆರವಾದರು.
ಇವರು 2ನೇ ವಿಕೆಟ್ ಜೊತೆಯಾಟದಲ್ಲಿ ಪರಾಗ್ ಜೊತೆ 56 ರನ್ಗಳ ಜೊತೆಯಾಟ ನಡೆಸಿದರು. ಪರಾಗ್ 22 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 30 ರನ್ಗಳಿಸಿ ದಯಾಳ್ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಧುವ್ ಜುರೆಲ್ ಅಜೇಯ 35ರನ್ಗಳಿಸಿ 174ರನ್ಗಳ ಸವಾಲಿನ ಗುರಿ ನೀಡಿದ್ದಾರೆ.