ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಶ್ಯಾಮ್‌ಸುಂದರ್ ವಿಧಿವಶ!

0
Spread the love

ಬೆಂಗಳೂರು:- ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಶ್ಯಾಮ್‌ಸುಂದರ್ ವಿಧಿವಶರಾಗಿದ್ದಾರೆ.

Advertisement

ಕಳೆದ ಕೆಲ ದಿನಗಳ ಹಿಂದೆ ಶ್ಯಾಮ್‌ಸುಂದರ್‌ ಅವರು, ಅನಾರೋಗ್ಯಕ್ಕೆ ತುತ್ತಾಗಿದ್ದರು. ಇವರನ್ನು ವಿದ್ಯಾಪೀಠ ಸರ್ಕಲ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಇಂದು ರಾತ್ರಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಅವಿವಾಹಿತರಾಗಿದ್ದ ಶ್ಯಾಮ್‌ಸುಂದರ್‌ ಅವರು ಎದ್ದೇಳು ಮಂಜುನಾಥ ಸಿನಿಮಾದಲ್ಲಿ ಬ್ಯಾಂಕ್ ಮ್ಯಾನೇಜರ್ ಪಾತ್ರವನ್ನೂ ನಿರ್ವಹಿಸಿದ್ದರು. ಪತ್ರಕರ್ತರ ಬಳಗದಲ್ಲಿ ಶಾಮಿ ಎಂದೇ ಪ್ರಸಿದ್ಧಿ ಪಡೆದಿದ್ದರು. ಶ್ಯಾಮ್‌ಸುಂದರ್‌ ಡಿಜಿಟಲ್ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದವರು ಅಂದ್ರೆ ತಪ್ಪಾಗಲಾರದು.


Spread the love

LEAVE A REPLY

Please enter your comment!
Please enter your name here