ಬೆಂಗಳೂರು: ಕ್ಷುಲ್ಲಕ ಹೇಳಿಕೆ ಕೊಟ್ಟು ರಾಜಕೀಯ ಬೆಳೆ ಬೇಯಿಸಿಕೊಳ್ಳೋದು ಕುಮಾರಸ್ವಾಮಿ ಬಿಡಲಿ ಎಂದು ಕಾಂಗ್ರೆಸ್ ಶಾಸಕ ಬಾಲಕೃಷ್ಣ ಕಿಡಿಕಾರಿದ್ದಾರೆ. ಡಿಕೆಶಿ ಪೆನ್ನು ಪೇಪರ್ ಕೇಳಿ ಸಮುದಾಯಕ್ಕೆ ಅನ್ಯಾಯ ಮಾಡ್ತಿದ್ದಾರೆ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು,
Advertisement
ಕುಮಾರಸ್ವಾಮಿ ಅವರಿಗೆ ಕಣ್ಣು ಬಿಟ್ಟರೂ, ನಿದ್ರೆಯಲ್ಲೂ ಶಿವಕುಮಾರ್, ಸಿದ್ದರಾಮಯ್ಯ ಕಾಣ್ತಾರೆ. ಮೊಸರಲ್ಲಿ ಕಲ್ಲು ಹುಡುಕೋದು ಬಿಡಬೇಕು. ಏನಾದ್ರು ಅಭಿಪ್ರಾಯ ಇದ್ದರೆ ಹೇಳಬೇಕು.
ಡಿಕೆಶಿಯವರಿಗೆ ಒಕ್ಕಲಿಗರೇನು ಹೆಚ್ಚು ಬೆಂಬಲ ನೀಡಿಲ್ಲ. ಕುಮಾರಸ್ವಾಮಿಯವರಿಗೆ ಹೆಚ್ಚು ಬೆಂಬಲ ನೀಡಿದ್ದು, ಅವರು ಈ ಜನಾಂಗಕ್ಕೆ ಏನು ನ್ಯಾಯ ಕೊಟ್ಟಿದ್ದೀನಿ ಎಂದು ಆಲೋಚನೆ ಮಾಡಬೇಕು. ಇಂತಹ ಕ್ಷುಲ್ಲಕ ಹೇಳಿಕೆ ಕೊಟ್ಟು ರಾಜಕೀಯ ಬೆಳೆ ಬೇಯಿಸಿಕೊಳ್ಳೋದು ಕುಮಾರಸ್ವಾಮಿ ಬಿಡಲಿ ಎಂದು ಕಿಡಿಕಾರಿದ್ದಾರೆ.