ವಿಜಯಪುರ:– ತಮ್ಮ ತಪ್ಪು ಮುಚ್ಚಿಕೊಳ್ಳಲು ರಾಜ್ಯ ಸರ್ಕಾರ ಜಾತಿಗಣತಿ ಜಾರಿಗೆ ಮುಂದಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮಾನ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಡಲಿ. ದುಡಿದ ಜನರಿಗೆ ಇಂದು ಸಂಬಳವಿಲ್ಲ, ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಏರುತ್ತಿದೆ. ಕುಡಿಯುವ ನೀರು ಸೇರಿದಂತೆ ಎಲ್ಲದಕ್ಕೂ ಬೆಲೆ ಹೆಚ್ಚಾಗಿದೆ. ನಾನು 18 ವರ್ಷದಿಂದ ಇಂತಹ ಸರ್ಕಾರ ನೋಡಿಲ್ಲ. ಅಧಿಕಾರಕ್ಕೆ ಬರುವುದಕ್ಕೂ ಮುನ್ನ, ಜನರಿಗೆ ಫ್ರೀಯಾಗಿ ಕೊಡುತ್ತೇನೆ ಎಂದು ಹೇಳಿ ಬಳಿಕ ಅಧಿಕಾರ ಸಿಕ್ಕ ಮೇಲೆ ಸಿದ್ದರಾಮಯ್ಯ ಇನ್ನೊಂದೆಡೆ ಬೆಲೆ ಏರಿಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಗೌರವ ಉಳಿಸಿಕೊಳ್ಳಬೇಕು ಎಂದರೆ ಮಂತ್ರಿಮಂಡಲ ತೊರೆಯಬೇಕು ಎಂದರು.
ಇಂದು ಕಾಂಟ್ರ್ಯಾಕ್ಟರ್ ಗಳಿಗೆ ಬಿಲ್ಲು ಇಲ್ಲ. ಪ್ರಮುಖವಾಗಿ ಜನಗಣತಿ ಜಾರಿಗೆ ಮುಂದಾಗಿರುವುದು ಅವರ ತಪ್ಪನ್ನು ಮುಚ್ಚಿಕೊಳ್ಳಲು. ರಾಜ್ಯದಲ್ಲಿ ಅಲ್ಪಸಂಖ್ಯಾತರು ದಲಿತರು ಎಂದು ಮತಕ್ಕಾಗಿ ಹೇಳುತ್ತಾರೆ. ಸಿದ್ದರಾಮಯ್ಯ ಮಾನ ಮರ್ಯಾದೆ ಇದ್ದರೆ ತಕ್ಷಣ ರಾಜೀನಾಮೆ ಕೊಡಬೇಕು. ಜಾತಿ ಜನಗಣತಿ ಇದು ವೈಜ್ಞಾನಿಕ ಅಲ್ಲ ಎಂದು ಅವರದ್ದೇ ಮಂತ್ರಿಗಳು ಹೇಳುತ್ತಿದ್ದಾರೆ. ಅಷ್ಟಕ್ಕೂ ಜಾತಿ ಗಣತಿ ಸೈಟಿಂಫಿಕ್ ಆಗಿದೆಯಾ…? ಅದನ್ನು ಯಾರೂ ಒಪ್ಪಿಕೊಳ್ಳಲ್ಲ, ನಾವಲ್ಲ ಅವರ ಕ್ಯಾಬಿನೆಟ್ ನಲ್ಲೇ ಹೊಡೆದಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.