ಮೈಸೂರು:- ಪ್ಲಾಸ್ಟಿಕ್ ಕವರ್ ನಲ್ಲಿದ್ದ ಪ್ರಸಾದ ತಿಂದು ಹರಕೆ ಹೋರಿ ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ ನಂಜನಗೂಡಿನ ದೇವಸ್ಥಾನದಲ್ಲಿ ಜರುಗಿದೆ.
Advertisement
ʻನಂಜುಂಡಪ್ಪನ ಗೂಳಿʼ ಅಂತಲೇ ಪ್ರಸಿದ್ಧಯಾಗಿದ್ದ ಹೋರಿ, ಪ್ರತಿ ನಿತ್ಯ ಅಂಗಡಿ ಮನೆಗಳಿಗೆ ತೆರಳುತ್ತಿತ್ತು. ಇಲ್ಲಿನ ಜನ ಪ್ರತಿದಿನ ನಂಜುಂಡಪ್ಪನ ಗೂಳಿಗೆ ಹಣ್ಣು, ಬೆಲ್ಲ, ಕಲಗಚ್ಚು, ನೀರು, ತರಕಾರಿ ನೀಡುತ್ತಿದ್ದರು. ಸದ್ಯ ಗೂಳಿ ಸಾವನ್ನಪ್ಪಿದ ಘಟನೆ ಕಂಡು ಮರುಗಿದ ಜನರು ಪ್ಲಾಸ್ಟಿಕ್ ಬಳಸದಂತೆ ಪ್ರವಾಸಿಗರು, ಭಕ್ತರಲ್ಲಿ ಮನವಿ ಮಾಡಿದ್ದಾರೆ.
ಹರಕೆಯ ಹೋರಿಗೆ ಕಪಿಲಾ ನದಿ ತೀರದಲ್ಲಿ ಸಾಂಪ್ರದಾಯಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ. ನಂಜನಗೂಡು ಯುವ ಬ್ರಿಗೇಡ್ ಹಾಗೂ ಸಾರ್ವಜನಿಕರು ಅಂತ್ಯಸಂಸ್ಕಾರ ನೆರವೇರಿಸಿದರು.