ಬೀದರ್:- ಈಜುಕೊಳದಲ್ಲಿ ಸ್ವಿಮ್ಮಿಂಗ್ ಮಾಡಲು ಹೋಗಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಬೀದರ್‌ನ ನರಸಿಂಹ ಝರಣಿ ದೇವಸ್ಥಾನದ ಹತ್ತಿರವಿರುವ ಖಾಸಗಿ ಈಜುಕೊಳದಲ್ಲಿ ಜರುಗಿದೆ.
Advertisement
19 ವರ್ಷದ ಸೈಯದ್ ಅಫಾನ್ ಮೃತ ಯುವಕ. ಸ್ನೇಹಿತರೊಂದಿಗೆ ಈಜುಲು ಹೋಗಿದ್ದಾಗ ದುರ್ಘಟನೆ ಸಂಭವಿಸಿದ್ದು, ತಲೆಯ ಹಿಂಭಾಗಕ್ಕೆ ಗಂಭೀರ ಪೆಟ್ಟಾಗಿ ಯುವಕ ಸ್ವಿಮ್ಮಿಂಗ್ ಪೂಲ್‌ನಲ್ಲೇ ಮುಳುಗಿ ಮೃತಪಟ್ಟಿದ್ದಾನೆ. ಈಜು ಕೊಳದಲ್ಲಿ ಪಲ್ಟಿ ಹೊಡೆಯುವ ವೇಳೆ ತಲೆಗೆ ಗಂಭೀರ ಪೆಟ್ಟಾಗಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ಬಳಿಕ ಈಜುಕೊಳ ಮಾಲೀಕರ ವಿರುದ್ಧ ಮೃತ ಯುವಕನ ಕುಟುಂಬಸ್ಥರು ನಿರ್ಲಕ್ಷ್ಯ ಆರೋಪ ಹೊರಿಸಿದ್ದಾರೆ. ನಿಷ್ಕಾಳಜಿ ವಹಿಸಿದ ಈಜುಕೊಳದ ಮಾಲೀಕರ ವಿರುದ್ಧ ಕಾನೂನು ಕ್ರಮಕ್ಕೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈಜುಕೊಳದ ಮಾಲೀಕ ಡಾ.ವೈಜಿನಾಥ ಮದನಾ ಎಂಬವರ ವಿರುದ್ಧ ಮೃತನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.