HomeSports NewsIPL 2025: ಸೋಲಿನೊಂದಿಗೆ ದಾಖಲೆ ಸೃಷ್ಟಿಸಿದ ಕೊಹ್ಲಿ ಸ್ನೇಹಿತ: ಟಿಮ್ ಡೇವಿಡ್ ಗೆ ಪಂದ್ಯ ಶ್ರೇಷ್ಠ...

IPL 2025: ಸೋಲಿನೊಂದಿಗೆ ದಾಖಲೆ ಸೃಷ್ಟಿಸಿದ ಕೊಹ್ಲಿ ಸ್ನೇಹಿತ: ಟಿಮ್ ಡೇವಿಡ್ ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ!

For Dai;y Updates Join Our whatsapp Group

Spread the love

ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಅದು ಕೂಡ ಆರ್​ಸಿಬಿ ದಾಂಡಿಗ ಟಿಮ್ ಡೇವಿಡ್ ಬ್ಯಾಟ್​ನಿಂದ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 5 ವಿಕೆಟ್ ಅಂತರದ ಹೀನಾಯ ಸೋಲು ಕಂಡಿತು.

ಬೆಂಗಳೂರು (RCB) ತಂಡದ ಎಲ್ಲಾ ಬ್ಯಾಟರ್​ಗಳು ವಿಫಲರಾದರೂ ಟಿಮ್ ಡೇವಿಡ್ (Tim David) ಮಾತ್ರ ಅಬ್ಬರಿಸಿದ್ದರು. ಕೇವಲ 26 ಎಸೆತಗಳನ್ನು ಎದುರಿಸಿದ ಟಿಮ್ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 50 ರನ್ ಬಾರಿಸಿದರು. ಈ ಮೂಲಕ 63 ರನ್​ಗಳಿಗೆ 9 ವಿಕೆಟ್ ಕಳೆದುಕೊಂಡಿದ್ದ ಆರ್​ಸಿಬಿ ತಂಡದ ಸ್ಕೋರ್ ಅನ್ನು 95 ಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಭರ್ಜರಿ ಪ್ರದರ್ಶನದ ಫಲವಾಗಿ ಟಿಮ್ ಡೇವಿಡ್​ಗೆ 5 ಪ್ರಶಸ್ತಿಗಳು ಒಲಿದಿವೆ.

ಪ್ಲೇಯರ್ ಆಫ್ ದಿ ಮ್ಯಾಚ್: ಪಂಜಾಬ್ ಕಿಂಗ್ಸ್ – ಆರ್​ಸಿಬಿ ನಡುವಣ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಏಕೈಕ ಬ್ಯಾಟರ್ ಟಿಮ್ ಡೇವಿಡ್. ಬ್ಯಾಟಿಂಗ್​ ಕಷ್ಟಕರವಾಗಿದ್ದ ಪಿಚ್​ನಲ್ಲಿ ಅಬ್ಬರಿಸಿದ್ದ ಟಿಮ್​ಗೆ ನಿರೀಕ್ಷೆಯಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದಿದೆ. ಈ ಮೂಲಕ 1 ಲಕ್ಷ ರೂ. ಬಹುಮಾನ ಪಡೆದಿದ್ದಾರೆ.

ಸೂಪರ್ ಸ್ಟ್ರೈಕರ್ ಆಫ್ ದಿ ಮ್ಯಾಚ್: ಈ ಪಂದ್ಯದಲ್ಲಿ ಟಿಮ್ ಡೇವಿಡ್ 26 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 50 ರನ್ ಬಾರಿಸಿದ್ದರು. ಅದು ಸಹ 192ರ ಸ್ಟ್ರೈಕ್ ರೇಟ್​ನಲ್ಲಿ ಎಂಬುದು ವಿಶೇಷ. ಈ ಮೂಲಕ 1 ಲಕ್ಷ ರೂ. ಬಹುಮಾನದ ಸೂಪರ್ ಸ್ಟ್ರೈಕರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಸಹ ಟಿಮ್ ಡೇವಿಡ್ ತಮ್ಮದಾಗಿಸಿಕೊಂಡಿದ್ದಾರೆ.

ಸೂಪರ್ ಸಿಕ್ಸಸ್ ಅಫ್ ದಿ ಮ್ಯಾಚ್: ಆರ್​ಸಿಬಿ-ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಟಿಮ್ ಡೇವಿಡ್ 3 ಭರ್ಜರಿ ಸಿಕ್ಸ್​ಗಳನ್ನು ಬಾರಿಸಿದ್ದರು. ಈ ಮೂಲಕ ಐಪಿಎಲ್​ನ 34ನೇ ಪಂದ್ಯದಲ್ಲಿ ಸೂಪರ್ ಸಿಕ್ಸಸ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕಾಗಿ ಟಿಮ್ ಡೇವಿಡ್​ಗೆ 1 ಲಕ್ಷ ರೂ. ಬಹುಮಾನ ಸಿಕ್ಕಿದೆ.

ಫೋರ್ಸ್ ಆಫ್ ದಿ ಮ್ಯಾಚ್: ಪಂಜಾಬ್ ಕಿಂಗ್ಸ್ ಹಾಗೂ ಆರ್​ಸಿಬಿ ನಡುವಣ ಪಂದ್ಯದಲ್ಲಿ ಅತ್ಯಧಿಕ ಫೋರ್ ಬಾರಿಸಿದ್ದು ಕೂಡ ಟಿಮ್ ಡೇವಿಡ್. ಟಿಮ್ ಇನಿಂಗ್ಸ್​ನಲ್ಲಿ ಒಟ್ಟು 5 ಫೋರ್​ಗಳು ಮೂಡಿಬಂದಿದ್ದವು. ಹೀಗಾಗಿ 1 ಲಕ್ಷ ರೂ. ಮೌಲ್ಯದ ಫೋರ್ಸ್ ಆಫ್ ದಿ ಮ್ಯಾಚ್ ಪ್ರಶಸ್ತಿ ಕೂಡ ಟಿಮ್ ಡೇವಿಡ್​ಗೆ ಒಲಿಯಿತು.

ಫ್ಯಾಂಟಸಿ ಕಿಂಗ್ ಆಫ್ ದಿ ಮ್ಯಾಚ್:  ಈ ಪಂದ್ಯದಲ್ಲಿ ಅತ್ಯಧಿಕ ಫ್ಯಾಂಟಸಿ ಪಾಯಿಂಟ್ಸ್ ಪಡೆಯುವ ಮೂಲಕ 1 ಲಕ್ಷ ರೂ. ಮೌಲ್ಯದ ಫ್ಯಾಂಟಸಿ ಕಿಂಗ್ ಆಫ್ ದಿ ಮ್ಯಾಚ್ ಬಹುಮಾನವನ್ನು ಸಹ ಟಿಮ್ ಡೇವಿಡ್ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಒಂದೇ ಪಂದ್ಯದಲ್ಲಿ 5 ಪ್ರಶಸ್ತಿಗಳೊಂದಿಗೆ ಟಿಮ್ ಡೇವಿಡ್ ಒಟ್ಟು 5 ಲಕ್ಷ ರೂ. ಪಡೆದುಕೊಂಢಿದ್ದಾರೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!