ವಿಜಯಸಾಕ್ಷಿ ಸುದ್ದಿ, ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕೆ.ಎಚ್. ಪಾಟೀಲ ಕರಿಯರ್ ಅಕಾಡೆಮಿಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯವರಿಂದ ಯುವ ಮುಖಂಡ ಕೃಷ್ಣಗೌಡ ಎಚ್.ಪಾಟೀಲರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಡಾ. ಎಸ್.ಎಫ್. ಸಿದ್ನೆಕೊಪ್ಪ ಮಾತಾನಾಡಿ, ಕೃಷ್ಣಗೌಡರ ಕನಸಾದ ಈ ಅಕಾಡೆಮಿಯ ಆಶೋತ್ತರಗಳ ಕುರಿತು ತಿಳಿಸುತ್ತ, ಎಲ್ಲರನ್ನೂ ಸ್ವಾಗತಿಸಿದರು. ಮುಖ್ಯ ಅತಿಥಿಗಳಾದ ನರೇಗಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಲ್. ಗುಳೇದಗುಡ್ಡ ಮಾತನಾಡಿ, ತಾವೆಲ್ಲರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಿ, ಉದ್ಯೋಗ ಪಡೆದುಕೊಳ್ಳುವ ಮೂಲಕ ಸುಂದರ ಜೀವನವನ್ನು ರೂಪಿಸಿಕೊಳ್ಳಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ವ್ಹಿ.ಪಿ. ಬಿಂಕದಕಟ್ಟಿ, ಪ್ರೊ. ರಘು ಕೆ.ಸಿ., ಪ್ರೊ. ವ್ಹಿ.ಡಿ. ಮುಳಗುಂದ, ಪ್ರೊ. ಎಂ.ಎಚ್. ಕರ್ಲವಾಡ, ಪ್ರೊ. ಎನ್.ಎಚ್. ಕರ್ಲವಾಡ, ಪ್ರೊ. ವಿಜಯಕುಮಾರ ದೇಸಾಯಿಗೌಡ್ರ, ಪ್ರೊ. ಶರಣು ಮರೇಗುದ್ದಿ, ಪ್ರೊ. ಬಿ.ಪಿ. ನವಲೂರಕರ, ಪ್ರೊ. ಆರ್.ಆರ್. ಕಾಶಪ್ಪನವರ, ಪ್ರೊ. ಎಂ.ಎಲ್. ಪಾಟೀಲ, ಪ್ರೊ. ಎಸ್.ಎಸ್. ಹುಲ್ಲೂರ, ಡಾ. ಪರಿಮಳಾ ವ್ಹಿ.ದೇಶಪಾಂಡೆ, ಅಶ್ವಿನಿ ಉಪ್ಪಿನ, ಪ್ರೊ. ಶಿವಾನಂದ, ಜೆಟ್ಟೆಣ್ಣವರ, ಪ್ರೊ. ಷಣ್ಮುಖ ಮತ್ತೂರ, ಪ್ರೊ. ನಿಸಾರ್‌ಅಹ್ಮದ್ ಯರಗುಡಿ, ಪ್ರೊ. ಕೆ.ಎಂ. ಶಿರೂರ, ವಿಜಯ ಮಡಿವಾಳರ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.