ಬೀದರ್, ಶಿವಮೊಗ್ಗ ಬೆನ್ನಲ್ಲೇ ಧಾರವಾಡದಲ್ಲಿಯೂ ಜನಿವಾರ ವಿವಾದ: ಎಲ್ಲಿ?

0
Spread the love

ಧಾರವಾಡ:- ಬೀದರ್, ಶಿವಮೊಗ್ಗ ಬೆನ್ನಲ್ಲೇ ಧಾರವಾಡದಲ್ಲಿಯೂ ಜನಿವಾರ ವಿವಾದ ಬೆಳಕಿಗೆ ಬಂದಿದೆ. ಜಿಲ್ಲೆಯ ಹುರಕಡ್ಲಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯ ಜನಿವಾರ ಕತ್ತರಿಸಿ ಸಿಇಟಿ ಪರೀಕ್ಷೆಗೆ ಅವಕಾಶ ಕೊಟ್ಟಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

Advertisement

ನಗರದ ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿ ನಂದನ್ ಏರಿ ಸಿಇಟಿ ಪರೀಕ್ಷೆ ಬರೆಯಲು ಹೋಗಿದ್ದ. ವಿದ್ಯಾರ್ಥಿಗಳ ತಪಾಸಣೆ ಮಾಡುವಾಗ ಪರೀಕ್ಷಾ ಕೇಂದ್ರದ ಸಿಬ್ಬಂದಿಯೊಬ್ಬರು ನಂದನ್ ಎಂಬ ಅಭ್ಯರ್ಥಿ ಹಾಕಿಕೊಂಡಿದ್ದ ಜನಿವಾರವನ್ನು ಗಮನಿಸಿದ್ದರು. ಆಗ ಜನಿವಾರ ಹಾಕಿಕೊಂಡು ಪರೀಕ್ಷಾ ಕೇಂದ್ರದೊಳಗೆ ಹೋಗುವಂತಿಲ್ಲ ಎಂದು ತಡೆದಿದ್ದರು. ಅದಕ್ಕೆ ವಿದ್ಯಾರ್ಥಿ ನಾನು ಬ್ಯಾಗಿನೊಳಗೆ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದ. ಆದರೆ ಅದಕ್ಕೂ ಅವಕಾಶ ನೀಡದೇ ಅದಕ್ಕೆ ಸಮಯವಿಲ್ಲ ಎಂದು ಜನಿವಾರವನ್ನು ಕತ್ತರಿಸಿದ್ದರು. ಅದನ್ನು ಹಾಗೇ ಬ್ಯಾಗ್‌ನಲ್ಲಿಟ್ಟುಕೊಂಡಿದ್ದ ನಂದನ್ ಗಾಬರಿಗೊಳಗಾಗಿದ್ದ.

ಮಾಧ್ಯಮಗಳಲ್ಲಿ ಕಳೆದೆರಡು ದಿನಗಳಿಂದ ಬರುತ್ತಿದ್ದ ಶಿವಮೊಗ್ಗ, ಬೀದರ್ ಜನಿವಾರದ ಸುದ್ದಿಗಳನ್ನು ಗಮನಿಸಿದ್ದ ಹುಡುಗ ತನಗಾಗಿದ್ದರ ಕುರಿತು ತನ್ನ ತಂದೆಗೆ ತಿಳಿಸಿದ್ದಾನೆ. ಇದನ್ನು ತಿಳಿದ ತಂದೆ ಆಕ್ರೋಶಗೊಂಡಿದ್ದು, ಇದೇ ಕಾರಣದಿಂದ ಮಗನಿಗೆ ಸರಿಯಾಗಿ ಪರೀಕ್ಷೆ ಬರೆಯಲು ಆಗಿಲ್ಲ ಎಂದು ಕಿಡಿಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here