ಬೆಂಗಳೂರು: ಜಾತಿ ಜನಗಣತಿ ಸರ್ವೇ ಬಗ್ಗೆ ಕ್ಷೇತ್ರಗಳಲ್ಲಿ ನಮ್ಮ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಮ್ಮ ಹೈಕಮಾಂಡ್, ನಮ್ಮ ನಾಯಕರು, ಜನಾಂಗದ ನಾಯಕರು ಇದ್ದಾರೆ,
Advertisement
ಅವರು ತೀರ್ಮಾನ ಮಾಡುತ್ತಾರೆ. ನಾವು ಈಗಾಗಲೇ ನಮ್ಮ ಅಭಿಪ್ರಾಯವನ್ನು ನಾವು ಹೇಳಿದ್ದೀವಿ. ಸರ್ವೇ ಬಗ್ಗೆ ಕ್ಷೇತ್ರಗಳಲ್ಲಿ ನಮ್ಮ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಆ ವಿರೋಧಿಗಳನ್ನು ಬಾಯಿ ಮುಚ್ಚಿಸಬೇಕಾದರೆ ಮರು ಸರ್ವೆ ಆಗಬೇಕು ಎಂದರು.
ಇದೇ ವೇಳೆ ಅಶೋಕ್ಗೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯ ಮನೆಯಲ್ಲಿ ವರದಿ ಆಗಿಬಿಡುತ್ತಾ? ವರದಿಯ ಲೋಪವನ್ನು ಸರಿ ಮಾಡಿ ಎಂದು ಒತ್ತಾಯ ಮಾಡಲಿ. ಬಾಯಿಗೆ ಬಂದದ್ದು ಮಾತನಾಡುವುದನ್ನು ಬಿಟ್ಟು, ಎಲ್ಲಿ ಲೋಪ ಆಗಿದೆ, ಹೇಗೆ ಸರಿಪಡಿಸಬೇಕು ಎಂಬ ಬಗ್ಗೆ ವಿಪಕ್ಷಗಳು ಚರ್ಚೆ ಮಾಡಲಿ. ಚಿಲ್ಲರೆ ರೀತಿ ಮಾತನಾಡಬಾರದು ಎಂದು ಕಿಡಿಕಾರಿದರು.