ಜಾತ್ರೆಯ ನಿಮಿತ್ತ ಸಾಮೂಹಿಕ ವಿವಾಹ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಹೊಸಹಳ್ಳಿಯ ಶ್ರೀ ಜಗದ್ಗುರು ಪೂಜ್ಯ ಬೂದೀಶ್ವರ ಸಂಸ್ಥಾನ ಮಠದಲ್ಲಿ ಮೇ. 25ರಂದು ನಡೆಯುವ ಜಗದ್ಗುರು ಶ್ರೀ ಬೂದೀಶ್ವರ ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ.

Advertisement

ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳಲು ಇಚ್ಛಿಸುವವರು ವಧು-ವರರ ದಾಖಲೆಗಳನ್ನು ಮೇ ತಿಂಗಳ 15ರ ಒಳಗಾಗಿ ಶ್ರೀ ಮಠದ ಕಚೇರಿಗೆ ಸಲ್ಲಿಸಿ ದಾಖಲಿಸಬೇಕು. ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳಲು ಇಚ್ಚಿಸುವವರು ಶಾಲಾ ದಾಖಲಾತಿ ಪತ್ರ ಅಥವಾ ವಯಸ್ಸಿನ ಧೃಡೀಕರಣದ ಮೂಲ ಪ್ರತಿ, ಆಧಾರ್ ಕಾರ್ಡ್, ವಧು-ವರರ ಇತ್ತೀಚಿನ 4 ಭಾವಚಿತ್ರಗಳು, ರಹವಾಸಿ ಪತ್ರ (ಪಂಚಾಯಿತಿಯಿAದ ಅಥವಾ ಗ್ರಾಮ ಲೆಕ್ಕಾಧಿಕಾರಿಗಳಿಂದ), ಸರ್ಕಾರಿ ಆಸ್ಪತ್ರೆಯಿಂದ ಆರೋಗ್ಯ ಸರ್ಟಿಫಿಕೇಟ್, ರೇಷನ್ ಕಾರ್ಡ್, ಸಾಕ್ಷಿದಾರರ ಆಧಾರ್ ಕಾರ್ಡ್ ಝರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು.

ಈ ಎಲ್ಲ ದಾಖಲೆಗಳನ್ನು ಸಲ್ಲಿಸುವಾಗ ಮೂಲ ಪ್ರತಿಗಳನ್ನು ತೋರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಂಕ್ರಪ್ಪ ಬ್ಯಾಹಟ್ಟಿ-80889 85840 ಈ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದೆ.


Spread the love

LEAVE A REPLY

Please enter your comment!
Please enter your name here