Actress Archana Kottige: ಕ್ರಿಕೆಟರ್ ಶರತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅರ್ಚನಾ ಕೊಟ್ಟಿಗೆ..!

0
Spread the love

ಕನ್ನಡ ಚಿತ್ರರಂಗದ ನಟಿ ಅರ್ಚನಾ ಕೊಟ್ಟಿಗೆ ಮತ್ತು ಕ್ರಿಕೆಟರ್ ಬಿ.ಆರ್. ಶರತ್ ಅವರ ಅದ್ದೂರಿ ವಿವಾಹ ಬೆಂಗಳೂರಿನಲ್ಲಿ ನಡೆದಿದೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಕ್ರಿಕೆಟರ್ ಶರತ್ ಬಿ.ಆರ್ ಜೊತೆ ಇಂದು ನಟಿ ಹಸೆಮಣೆ ಏರಿದ್ದಾರೆ. ಇಂದು ಅದ್ಧೂರಿ ವಿವಾಹ ಸಮಾರಂಭದಲ್ಲಿ ಅಮೃತಾ ಅಯ್ಯಂಗಾರ್, ಖುಷಿ ರವಿ, ಆಶಿಕಾ ರಂಗನಾಥ್, ಗೌರಿ ಶ್ರುತಿ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಈ ಮದುವೆ ಜರುಗಿದೆ. ನಿನ್ನೆ ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಈ ವೇಳೆ, ಸಪ್ತಮಿ ಗೌಡ, ಸ್ವಾನಿ ಸುದೀಪ್, ಆಶಿಕಾ ರಂಗನಾಥ್, ಖುಷಿ ರವಿ, ಅಮೃತಾ ಅಯ್ಯಂಗಾರ್, ತೇಜಸ್ವಿನಿ ಶರ್ಮಾ, ಸಾನ್ಯ ಅಯ್ಯರ್, ಯುವ ರಾಜ್‌ಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿ ನವಜೋಡಿ ಶುಭಕೋರಿದರು.

ಕ್ರಿಕೆಟರ್ ಪ್ರಸಿದ್ಧ್ ಕೃಷ್ಣ, ವೈಶಾಖ್ ವಿಜಯ್ ಕುಮಾರ್, ದೇವದತ್ ಪಡಿಕ್ಕಲ್ ಅನೇಕರು ಭಾಗಿಯಾಗಿ ಸ್ನೇಹಿತ ಶರತ್ ಹಾಗೂ ಅರ್ಚನಾ ದಂಪತಿಗೆ ಶುಭಹಾರೈಸಿದರು. ಅಂದಹಾಗೆ, ಅರ್ಚನಾ ಅವರು ಡಿಯರ್ ಸತ್ಯ,

ಎಲ್ರ ಕಾಲೆಳೆಯುತ್ತೆ ಕಾಲ, ಶಬರಿ, ಒಂದು ಅಲಂಕಾರ ವಿದ್ಯಾರ್ಥಿ, ಹೊಂದಿಸಿ ಬರೆಯಿರಿ ಸೇರಿದಂತೆ 8ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತ ಶರತ್ ಅವರು ಕರ್ನಾಟಕ ಕ್ರಿಕೆಟರ್ ಆಟಗಾರ. ಬ್ಯಾಟರ್ ಹಾಗೂ ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದಾರೆ.

 


Spread the love

LEAVE A REPLY

Please enter your comment!
Please enter your name here